ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕರು ತವರಿಗೆ: ನಿರಾಶ್ರಿತರೊಂದಿಗೆ ಪೇದೆ ಭಜನೆ

ಉಡುಪಿ ಜಿಲ್ಲೆಗೆ ಕೂಲಿ ಕೆಲಸಕ್ಕೆ ಬಂದು ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

By

Published : Apr 28, 2020, 12:12 PM IST

fcwdff
ನಿರಾಶ್ರಿತರೊಂದಿಗೆ ಪೇದೆ ಭಜನೆ

ಉಡುಪಿ: ಕೂಲಿ ಕೆಲಸಕ್ಕೆ ಬಂದು ಲಾಕ್‌ಡೌನ್‌ಗೆ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು ತವರಿಗೆ: ನಿರಾಶ್ರಿತರೊಂದಿಗೆ ಪೇದೆ ಭಜನೆ

ಕಳೆದ ಒಂದು ತಿಂಗಳಿಂದ ಉಡುಪಿ ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ನೂರಾರು ಕಾರ್ಮಿಕರು ಆಶ್ರಯ ಪಡೆದಿದ್ದರು. ಇವರಿಗೆ ಊಟ, ಹಾಲು, ಬಟ್ಟೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಕಟಪಾಡಿಯ ಎಸ್​.ವಿ.ಎಸ್​ ಶಾಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಸುಮಾರು 21 ಮಂದಿ ಕೂಲಿ ಕಾರ್ಮಿಕರು ಆಶ್ರಯ ಪಡೆದಿದ್ದರು.

ಒಂದು ತಿಂಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಸ್ಥಳೀಯ ಪೊಲೀಸ್ ಸಿಬ್ಬಂದಿ ಶಿವಾನಂದ ಅವರು, ಕಾರ್ಮಿಕರ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಈಗ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿಕೊಡುವ ಸಮಯ ಬಂದಿದೆ. ಹಾಗಾಗಿ ಇವರನ್ನು ಬೀಳ್ಕೊಡುವ ಮುನ್ನ ಶಿವಾನಂದ್ ಕಾರ್ಮಿಕರೊಂದಿಗೆ ಸೇರಿ ಭಜನಾ ಕೂಟ ನಡೆಸಿದ್ದಾರೆ.

ನಿರಾಶ್ರಿತ ಕಾರ್ಮಿಕರು ಮತ್ತು ಪೊಲೀಸ್ ಜೊತೆಯಾಗಿ ಕುಳಿತು ಭಜನೆ ಮಾಡಿ ಸಮಯ ಕಳೆದಿದ್ದಾರೆ. ಪೇದೆಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details