ಕರ್ನಾಟಕ

karnataka

ETV Bharat / state

ಆರೋಗ್ಯ ಸೇತು ಆ್ಯಪ್​​​​ ತಂದ ಗೊಂದಲ: ಕುಂದಾಪುರದಲ್ಲಿ ಆತಂಕ ಸೃಷ್ಟಿಸಿದ ತಪ್ಪು ಮಾಹಿತಿ! - ಆರೋಗ್ಯ ಸೇತು ಆ್ಯಪ್​​ನಿಂದ ಜನರಲ್ಲಿ ಗೊಂದಲ

ಆರೋಗ್ಯ ಸೇತು ಆ್ಯಪ್​​​ನಲ್ಲಿ ಕೊರೊನಾ ಪಾಸಿಟಿವ್​ ಬಂದಿರುವ ವ್ಯಕ್ತಿಯೊಬ್ಬ ಉಡುಪಿಯ ಬೈಂದೂರಿನಲ್ಲಿದ್ದಾನೆ ಎಂಬ ತಪ್ಪಾದ ಮಾಹಿತಿ ಅಪ್​​ಲೋಡ್​ ಆಗಿದ್ದ ಹಿನ್ನೆಲೆ ಜನ ಆತಂಕ್ಕೊಳಗಾಗಿದ್ದರು.

arogya setu app mistake makes bainduru people panic
ಆರೋಗ್ಯ ಸೇತು app ತಂದ ಗೊಂದಲ

By

Published : May 2, 2020, 8:20 PM IST

ಉಡುಪಿ:ಆರೋಗ್ಯ ಸೇತು ಆ್ಯಪ್​ ತಂದ ಗೊಂದಲದಿಂದಾಗಿ ಕುಂದಾಪುರ ತಾಲೂಕಿನ ಬೈಂದೂರು ಜನತೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಬೈಂದೂರಿನ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಬಂದಿದ್ದರು. ಆರೋಗ್ಯ ಸೇತು ಆ್ಯಪ್​​ನಲ್ಲಿ ಈ ವ್ಯಕ್ತಿಗೆ ಪಾಸಿಟಿವ್ ಬಂದಿದೆ ಎಂದು ಅಪ್​ಲೋಡ್ ಆಗಿತ್ತು. ಅಲ್ಲದೇ ಪಾಸಿಟಿವ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂದು ಆ್ಯಪ್​​​ನಲ್ಲಿ ಮಾಹಿತಿ ಅಪ್​ಲೋಡ್​ ಆಗಿತ್ತು.

ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದ ನಂತರ ಈ ವದಂತಿಗೆ ಬ್ರೇಕ್ ಬಿದ್ದಿದ್ದು, ಜನತೆ ನಿರಾಳರಾಗಿದ್ದಾರೆ. ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿದೆ ಎಂಬುದು ಖಾತ್ರಿಯಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮತ್ತೊಮ್ಮೆ ಪರೀಕ್ಷೆಗಾಗಿ ಈ ಬೈಂದೂರು ವ್ಯಕ್ತಿಯ ಗಂಟಲಿನ ದ್ರವವನ್ನು ಉಡುಪಿ ಲ್ಯಾಬ್​​ಗೆ ರವಾನಿಸಲಾಗಿದೆ.

ABOUT THE AUTHOR

...view details