ಉಡುಪಿ: ಇಲ್ಲಿನ ಮಲ್ಪೆ ಬಂದರಿನ ಪರಿಸರದಲ್ಲಿ ಅನಾಮಿಕ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮಹಿಳಾ ಪೊಲೀಸ್ ಸಹಾಯದಿಂದ ರಕ್ಷಿಸಿ ಸುರಕ್ಷಿತವಾಗಿ ಮಂಜೇಶ್ವರ ಸಾಯಿ ಆಶ್ರಮಕ್ಕೆ ಸೇರಿಸಿದ್ದಾರೆ.
ಮಲ್ಪೆ ಬೀಚ್ ಬಳಿ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ - ಉಡುಪಿಯಲ್ಲಿ ಮಾನಸಿಕ ಮಹಿಳೆಗೆ ದೌರ್ಜನ್ಯ
ಉಡುಪಿಯ ಮಲ್ಪೆ ಬಂದರಿನ ಪರಿಸರದಲ್ಲಿ ಅನಾಮಿಕ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮಹಿಳಾ ಪೊಲೀಸ್ ಸಹಾಯದಿಂದ ವೃದ್ಧೆಯನ್ನು ಸುರಕ್ಷಿತವಾಗಿ ಮಂಜೇಶ್ವರ ಸಾಯಿ ಆಶ್ರಮಕ್ಕೆ ಸೇರಿಸಿದ್ದಾರೆ.

ಮಾನಸಿಕ ಮಹಿಳೆಗೆ ದೌರ್ಜನ್ಯ
ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ
ಸುಮಾರು 55 ವರ್ಷದ ಮಾನಸಿಕ ಅಸ್ವಸ್ಥ ಅಪರಿಚಿತ ಮಹಿಳೆ, ಮಲ್ಪೆ ಬಂದರು ಪ್ರದೇಶದಲ್ಲಿ ನೆಲೆ ಇಲ್ಲದೆ ತಿರುಗಾಡುತ್ತಿದ್ದಳು. ಮಹಿಳೆಗೆ ಪುರ್ನವಸತಿ ಕಲ್ಪಿಸುವಂತೆ ಈ ಮೊದಲು ಸಾರ್ವಜನಿಕರು ಸಂಬಂಧ ಪಟ್ಟವರಿಗೆ ದೂರು ನೀಡಿದ್ದರೂ ಕೂಡಾ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಸಮಯದಲ್ಲಿಯೇ ವ್ಯಕ್ತಿಯೋರ್ವ, ಮಾನಸಿಕ ಅಸ್ವಸ್ಥ ಮಹಿಳೆಯು ಜಟ್ಟಿ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದು ಬಂದಿದೆ. ಮಹಿಳೆ ಕಿರುಚಾಡಿದಾಗ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.