ಕರ್ನಾಟಕ

karnataka

ETV Bharat / state

ಕೊಲೆ ಮಾಡಿ ಅದನ್ನ ಆತ್ಮಹತ್ಯೆ ಅಂತಾ ಬಿಂಬಿಸಿದ್ದರು.. ಆದ್ರೀಗ ಐವರನ್ನ ಬಂಧಿಸಿದ ಪೊಲೀಸರು.. ಅದ್ಹೇಗೆ? - ಅಂಪಾರು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಈ ದೂರಿನಂತೆ ಶಂಕರನಾರಾಯಣ ಪೊಲೀಸರು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್‌ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ..

amparu-suicide-case
ಅಂಪಾರು ಆತ್ಮಹತ್ಯೆ ಪ್ರಕರಣ

By

Published : Oct 22, 2021, 5:43 PM IST

ಉಡುಪಿ :ಅಕ್ಟೋಬರ್‌ 19ರಂದುಅಂಪಾರಿನಲ್ಲಿ ನಡೆದಿದ್ದವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಮೃತನ ಪತ್ನಿ ಸಹಿತ ಐವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಬಾಲಕರಾಗಿದ್ದು, ಇಬ್ಬರನ್ನೂ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ.

ಅಂಪಾರು ಗ್ರಾಮದ ನಾಗರಾಜ (36) ಎಂಬುವರು ಕೊಲೆಗೀಡಾದ ವ್ಯಕ್ತಿ. ಪ್ರಕರಣ ಸಂಬಂಧ ಮೃತನ ಪತ್ನಿ ಮಮತಾ (34), ಆಕೆಯ ಪರಿಚಿತರಾಗಿರುವ ಕುಮಾರ್‌ ಹಾಗೂ ದಿನಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಇಬ್ಬರು ಬಾಲಕರನ್ನು ರೀಮ್ಯಾಂಡ್ ಹೋಮ್‌ಗೆ ಕಳಿಸಲಾಗಿದೆ.

ಕೊಲೆ ಶಂಕೆಗೆ ಕಾರಣವಾಯ್ತು ಗಾಯದ ಗುರುತು?:ನಾಗರಾಜ್​ ಶವವನ್ನು ಕುಟುಂಬದವರು ಪರೀಕ್ಷಿಸಿದಾಗ ಮೈಮೇಲೆ ಮತ್ತು ಕುತ್ತಿಗೆ ಭಾಗಗಳಲ್ಲಿ ಗಾಯಗಳು ಕಂಡು ಬಂದಿದ್ದವು. ದೇಹದ ಮೇಲಿದ್ದ ಕೆಲ ಗಾಯಗಳ ಕುರುಹುಗಳಿಂದ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ನಾಗರಾಜ ಅವರ ಸಹೋದರಿ ನಾಗರತ್ನಾ (40) ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನಂತೆ ಶಂಕರನಾರಾಯಣ ಪೊಲೀಸರು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್‌ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ABOUT THE AUTHOR

...view details