ಉಡುಪಿ: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಕಾಲದಲ್ಲಿ ಜಗತ್ತಿಗೆ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಲು ಉಡುಪಿಯಲ್ಲಿ ಅಘೋರಿಗಳು ಅಪರೂಪದ ಯಾಗ ನಡೆಸುತ್ತಿದ್ದಾರೆ. ಸಂಚಾರದಲ್ಲಿದ್ದ ಅಘೋರಿಗಳು ಇದ್ದಲ್ಲಿಯೇ ಯಾಗ ನಡೆಸಬೇಕು ಎಂಬ ಸಂಕಲ್ಪ ಕೈಗೊಂಡ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯ ಸಮುದ್ರ ತಟದಲ್ಲಿ ಈ ಮಹಾಯಾಗ ನಡೆಯುತ್ತಿದೆ.
ಸಮಸ್ತ ಲೋಕಕ್ಕೆ ಕಲ್ಯಾಣವಾಗಿಲಿ ಪ್ರಾರ್ಥಿಸಿ ಉಡುಪಿಯ ತೊಟ್ಟಂನಲ್ಲಿ ಅಕಾಲ ಮೃತ್ಯುಂಜಯ ಯಾಗ ಒಂಬತ್ತು ದಿನಗಳ ಅಹೋರಾತ್ರಿ ನಡೆಯುತ್ತಿದೆ. ಹಿಮಾಲಯದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. ಅಪಾರ ಪ್ರಮಾಣದ ಅಮೃತ ಬಳ್ಳಿ, ಗರಿಕೆ, ತುಪ್ಪ ಸೇರಿದಂತೆ ಹಲವು ಬಗೆಯ ಸಮಿದೆಯನ್ನು ಯಾಗಕ್ಕೆ ಹವಿಸ್ಸಾಗಿ ಬಳಸಲಾಗುತ್ತಿದೆ.