ಉಡುಪಿ :ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹಗರಣಗಳ ಸರಮಾಲೆ ಮತ್ತೊಮ್ಮೆ ಸದ್ದು ಮಾಡಿದೆ. ದೇವಾಲಯಗಳ ರಕ್ಷಣೆಗೆ ಹೋರಾಟ ನಡೆಸುವ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಆರೋಪಗಳ ಸುರಿಮಳೆಯನ್ನೇ ಹರಿಸಿದೆ. ಮಾಹಿತಿ ಹಕ್ಕಿನಡಿಯಲ್ಲಿ ಪಡೆದ ದಾಖಲೆಗಳ ಆಧಾರದಲ್ಲಿ 2018-19 ಸಾಲಿನವರೆಗೆ ನಡೆದ ಅನೇಕ ಹಗರಣಗಳನ್ನು ಬಯಲು ಮಾಡಿದೆ.
ಕೊಲ್ಲೂರು ಮುಕಾಂಬಿಕಾ ಕ್ಷೇತ್ರವೆಂದರೆ ಭಕ್ತರಿಗೆ ಎಲ್ಲಿಲ್ಲದ ಶೃದ್ಧೆ ಮತ್ತು ಅಭಿಮಾನ. ದೇಶದ ನಾನಾ ಭಾಗಳಿಂದ ಬರುವ ಭಕ್ತರು ಈ ಕ್ಷೇತ್ರದ ಬಗ್ಗೆ ಅಪಾರ ಭಕ್ತಿಯನ್ನು ವ್ಯಕಪಡಿಸುತ್ತಾರೆ. ಆದರೆ, ಭ್ರಷ್ಟಾಚಾರಿಗಳಿಗೆ ಜನರ ಭಕ್ತಿಯೇ ಬಂಡವಾಳ ಆಗ್ತಾ ಇದ್ಯಾ? ಹೀಗೊಂದು ಸಂಶಯ ಬರೋದಕ್ಕೆ ಕಾರಣವಾಗಿದೆ. ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಕೆಲವೊಂದು ದಾಖಲೆಗಳನ್ನು ಬಹಿರಂಗ ಮಾಡಿದೆ. ಅವರ ಪ್ರಕಾರ ದೇವಸ್ಥಾನದ ವ್ಯವಹಾರದಲ್ಲಿ 21.80 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಸಂಶಯಾಸ್ಪದವಾಗಿದೆ. ಇದು ಕೇವಲ ಮಹಾಸಂಘದವರು ಮಾಡಿದ ಆರೋಪವಲ್ಲ, ಬದಲಿಗೆ ಸ್ವತಃ ಸರ್ಕಾರಿ ಲೆಕ್ಕಪರಿಶೋಧಕರು ಮಾಹಿತಿ ನೀಡಿದ್ದಾರೆ.
ದೇವರಿಗೆ ಅರ್ಪಣೆಯಾದ ಕಿಲೋಗಟ್ಟಲೆ ಚಿನ್ನ ಕಾಣೆ :
ಹೌದು, ದೇವಸ್ಥಾನಗಳ ರಕ್ಷಣೆಯ ಉದ್ದೇಶ ಇರಿಸಿಕೊಂಡ ಮಹಾಸಂಘಟವು ಮಾಡಿರುವ ಆರೋಪಗಳು ಒಂದಕ್ಕಿಂತ ಇನ್ನೊಂದು ಗುರುತರವಾಗಿವೆ. 2016 ರಲ್ಲಿ ಕೊಲ್ಲೂರಮ್ಮನ ಚಿನ್ನವನ್ನು ದೇವಳದ ಸಿಬ್ಬಂದಿಗಳೇ ಕದ್ದು ಮಾರಿದ್ದು ಸುದ್ದಿಯಾಗಿತ್ತು. 4.20 ಕಿಲೋ ತೂಕದ ಬಂಗಾರ ದೇವಳದ ಇಇಒ ಸೇರಿದಂತೆ ಸಿಬ್ಬಂದಿಗಳ ಬೊಕ್ಕಸ ಸೇರಿತ್ತು. ಈ ಸಂಬಂಧ ಹಲವರ ಬಂಧನವಾಗಿದ್ದರೂ ಚಿನ್ನ-ಬೆಳ್ಳಿಯ ಲೆಕ್ಕಾಚಾರ ಇನ್ನೂ ಸರಿಯಾಗಿಲ್ಲ. 2018-19 ರ ವರೆಗೆ ಪಡೆದ ಚಿನ್ನದ ದೇಣಿಗೆಯ ಲೆಕ್ಕಾಚಾರವೇ ಇಲ್ಲ. ಹಾಗಾಗಿ ಹೊಸದಾಗಿ ನಡೆಸಿದ ಲೆಕ್ಕಪರಿಶೋಧನೆಯಲ್ಲೂ ಚಿನ್ನಾಭರಣದ ಮೌಲ್ಯ ತಾಳೆಯಾಗುತ್ತಿಲ್ಲ. ಆರೋಪಿಗಳು ಜಾಮೀನು ಪಡೆದು ಹೊರಬಂದು ಸುಖವಾಗಿದ್ದಾರೆ.
ಬಾಕಿ ವಸೂಲಿಯೇ ಲಕ್ಷಾಂತರ ಬಾಕಿ ಇಟ್ಟುಕೊಂಡ ದೇವಸ್ಥಾನ :