ಕರ್ನಾಟಕ

karnataka

ETV Bharat / state

ಕಾರುಗಳ ನಡುವೆ ಡಿಕ್ಕಿ: ಓರ್ವ ‌ಸಾವು, ಮೂವರಿಗೆ ಗಾಯ - ಕಾರುಗಳೆರಡರ ನಡುವೆ ಅಪಘಾತ

ಉಡುಪಿ ಜಿಲ್ಲೆಯ ಬೈಂದೂರು ‌ತಾಲೂಕಿನ ನಾಯ್ಕನಕಟ್ಟೆ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಓರ್ವ ಮೃತಪಟ್ಟಿದ್ದಾನೆ.

ಕಾರುಗಳೆರಡರ ನಡುವೆ ಅಪಘಾತ

By

Published : Sep 1, 2019, 2:57 AM IST

ಉಡುಪಿ:ಕಾರುಗಳ ನಡುವೆ ಅಪಘಾತ ಸಂಭವಿಸಿದ ಹಿನ್ನೆಲೆ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಭಟ್ಕಳ ಮೂಲದ ನೂರುಲ್ ಅಮೀನ್ (48) ಮೃತ ವ್ಯಕ್ತಿ. ಬೈಂದೂರು ‌ತಾಲೂಕಿನ ನಾಯ್ಕನಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಡಿವೈಡರ್ ಮೇಲೇರಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮಂಗಳೂರಿನಿಂದ ಭಟ್ಕಳಕ್ಕೆ ಹೋಗುತ್ತಿದ್ದ ನೂರುಲ್ ಅಮೀನ್ ಎಂಬುವರ ಕಾರು ಡಿವೈಡರ್ ಮೇಲೇರಿ, ವಿರುದ್ಧ ದಿಕ್ಕಿನ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನೂರುಲ್​ ಸಾವನ್ನಪ್ಪಿದ್ದು, ಇನ್ನೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details