ಉಡುಪಿ:ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭರತ್ ಶೆಟ್ಟಿ, ಭೂ ಪರಿವರ್ತನೆಗಾಗಿ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ - ಕುಂದಾಪುರ ಕಂದಾಯ ನಿರೀಕ್ಷಕ
ಭೂ ಪರಿವರ್ತನೆಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕುಂದಾಪುರ ಕಂದಾಯ ನಿರೀಕ್ಷಕರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಕುಂದಾಪುರದ ಕಂದಾಯ ನಿರೀಕ್ಷಕ
ಭೂ ಪರಿವರ್ತನೆಗಾಗಿ ಉಳ್ಳೂರು ನಿವಾಸಿ ರಾಘವೇಂದ್ರ ಸೂರ್ಯ ಎಂಬುವರ ಬಳಿ 12 ಸಾವಿರ ರೂಪಾಯಿ ನೀಡುವಂತೆ ಭರತ್ ಶೆಟ್ಟಿ ಬೇಡಿಕೆ ಇಟ್ಟಿದ್ದರಂತೆ. ಮೊದಲ ಹಂತವಾಗಿ 5 ಸಾವಿರ ರೂಪಾಯಿ ತೆಗೆದುಕೊಳ್ಳುವ ವೇಳೆ ಎಸಿಬಿ ಅಧಿಕಾರಿಗಳ ದಾಳಿಯಿಂದಾಗಿ ಭರತ್ ಶೆಟ್ಟಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.