ಕರ್ನಾಟಕ

karnataka

ETV Bharat / state

ಸರ್ಕಾರಿ ವಸತಿಗೃಹದಲ್ಲೇ ಅಕ್ರಮ ಕಡತ ವಿಲೇವಾರಿ; ಎಸಿಬಿ ಬಲೆಗೆ ಬಿದ್ದ AC ಮಧುಕೇಶ್ವರ್‌ - ಕೆ ಎ ಎಸ್ ಶ್ರೇಣಿಯ ಅಧಿಕಾರಿ

ಎರಡು ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿರುವ ಕುಂದಾಪುರ ಉಪ ವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿ ಗೃಹದ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಕ್ರಮವಾಗಿ ವಿಲೇವಾರಿ ನಡೆಸಲಾಗುತ್ತಿದ್ದ ಕಡತಗಳು ಮತ್ತು 1 ಲಕ್ಷ  28 ಸಾವಿರ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.

ಎಸಿ ಮುಧುಕೇಶ್ವರ ಮನೆ ಮೇಲೆ ಎಸಿಬಿ ದಾಳಿ

By

Published : Sep 19, 2019, 6:40 PM IST

ಉಡುಪಿ:ಎರಡು ದಿನಗಳ ಹಿಂದೆಷ್ಟೇ ವರ್ಗಾವಣೆಗೊಂಡಿರುವ ಕುಂದಾಪುರ ಉಪವಿಭಾಗಾಧಿಕಾರಿ ಡಾ. ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿ ಗೃಹದ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಕ್ರಮವಾಗಿ ವಿಲೇವಾರಿ ನಡೆಸಲಾಗುತ್ತಿದ್ದ ಕಡತಗಳು 1 ಲಕ್ಷ 28 ಸಾವಿರ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೆಎಎಸ್ ಶ್ರೇಣಿಯ ಹಿರಿಯ ಅಧಿಕಾರಿಯಾದಡಾ.ಮಧುಕೇಶ್ವರ್, ಕಳೆದ ಕೆಲವು ತಿಂಗಳ ಹಿಂದೆಷ್ಟೇ ಕುಂದಾಪುರದ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಎಸಿ ಮುಧುಕೇಶ್ವರ ಮನೆ ಮೇಲೆ ಎಸಿಬಿ ದಾಳಿ

ಡಾ.ಮಧುಕೇಶ್ವರ ಅವರ ಮೇಲೆ ಭ್ರಷ್ಟಾಚಾರ ಸಂಬಂಧಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಇವತ್ತು ದಾಳಿ ನಡೆಸಿದ್ದಾರೆ. ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದ ಅಧಿಕಾರಿಗೆ ಯಾವ ಹುದ್ದೆಯೂ ನಿಗದಿಯಾಗಿರಲಿಲ್ಲ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ರಾಜು ಕೆ ಅವರಿಗೆ ನಿರ್ಗಮನ ಅಧಿಕಾರಿಯಾಗಿ ಮಧುಕೇಶ್ವರ್ ಮನೆ ಬಿಟ್ಟುಕೊಡಬೇಕಿತ್ತು. ಆದರೆ ಅದೇ ಮನೆಯೊಳಗೆ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂದರ್ಭ ಆರೋಪಿ ಮಧುಕೇಶ್ವರ್ ಉಪವಿಭಾಗಾಧಿಕಾರಿಗಳಿಗೆ ಸರ್ಕಾರ ನೀಡಿರುವ ವಸತಿ ಗೃಹದಲ್ಲಿಯೇ ಅಕ್ರಮವಾಗಿ ಕಡತ ವಿಲೇವಾರಿ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ.

ಅಕ್ರಮವಾಗಿ ವಿಲೇವಾರಿ ಮಾಡುತ್ತಿದ್ದ 23 ಕಡತಗಳು 1 ಲಕ್ಷ 28 ಸಾವಿರ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details