ಕರ್ನಾಟಕ

karnataka

ETV Bharat / state

ಗಂಭೀರ ಗಾಯವಾಗಿದ್ದರೂ ಡೋಂಟ್​ ಕೇರ್​... ಆಂಬ್ಯುಲೆನ್ಸ್​​ನಲ್ಲಿ ಬಂದು ಮತ ಹಾಕಿದ ಯುವಕ! - undefined

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಉಳ್ತೂರಿನ ಯುವಕನೋರ್ವ ಎಲ್ಲರಿಗೂ ಮಾದರಿಯಾಗಿದ್ದಾರೆ. ಜಯಶೀಲ್ ಗೆ ಎರಡು ವಾರಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಬಲಗಾಲಿಗೆ ತೀವ್ರ ಗಾಯವಾಗಿದೆ. 3 ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಖಡಕ್ ಸೂಚನೆ ಸಹ ನೀಡಿದ್ದರು. ಆದ್ರೆ ಇಂದು ಆಂಬ್ಯುಲೆನ್ಸ್​ನಲ್ಲೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ ಜಯಶೀಲ್​.​

ಆಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ ಯುವಕ

By

Published : Apr 18, 2019, 5:10 PM IST

ಉಡುಪಿ: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕನೋರ್ವ ವೈದ್ಯರು ಸಲಹೆಯನ್ನೂ ಲೆಕ್ಕಿಸದೇ ಇಂದು ತನ್ನ ಹಕ್ಕು ಚಲಾಯಿಸಿ ಬೇರೆಯವರಿಗೂ ಮಾದರಿಯಾಗಿದ್ದಾರೆ. ಆಂಬುಲೆನ್ಸ್ ನಲ್ಲೇ ಮತಗಟ್ಟೆಗೆ ಬಂದು ಯುವಕ ಮತ ಹಾಕಿರುವ ಅಪರೂಪದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಆಂಬ್ಯುಲೆನ್ಸ್​ನಲ್ಲಿ ಬಂದು ಮತದಾನ ಮಾಡಿದ ಯುವಕ

ಕುಂದಾಪುರ ತಾಲೂಕು ಉಳ್ತೂರಿನ ಯುವಕ ಜಯಶೀಲ್​ ಗಾಯಗೊಂಡಿದ್ದರೂ ಪೋಲಿಂಗ್​ ಬೂತ್​ಗೆ ಬಂದು ಮತದಾನ ಚಲಾಯಿಸಿದ್ದಾರೆ. ಜಯಶೀಲ್​ಗೆ ಎರಡು ವಾರಗಳ ಹಿಂದೆ ಅಪಘಾತವಾಗಿತ್ತು. ಇದರಿಂದ ಬಲಗಾಲಿಗೆ ತೀವ್ರ ಗಾಯವಾಗಿದ್ದು, 3 ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ತಾನು ಮತ ಹಾಕಲೇಬೇಕು ಎಂದು ಕುಟುಂಬಸ್ಥರಲ್ಲಿ ಜಯಶೀಲ್​ ಒತ್ತಾಯಿಸಿದ್ದರು. ಕೊನೆಗೆ ಗೆಳೆಯರೆಲ್ಲ ಸೇರಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು.

ಈ ಮೂಲಕ ಮತದಾನಕ್ಕೆ ಹಿಂದೇಟು ಹಾಕುವವರಿಗೆ ಜಯಶೀಲ್ ಮಾದರಿಯಾದ್ದಾರೆ. ಸ್ಟ್ರೆಚ್ಚರ್​ನಲ್ಲಿ ಮಲಗಿಕೊಂಡೇ ಮತದಾನ‌ ಮಾಡಿ ಜಯಶೀಲ್ ಪೂಜಾರಿ ಎಲ್ಲರಿಗೂ ಒಂದು ಸಂದೇಶ ರವಾನಿಸಿದ್ದಾರೆ. ಮತದಾನದ ಬೆಲೆ ಏನು ಎಂಬುದನ್ನು ಇವರು ಸಾರಿ ಹೇಳಿದ್ದಾರೆ. ಮತಗಟ್ಟೆ ಅಧಿಕಾರಿಗಳು ಕೂಡಾ ಜಯಶೀಲ್ ಅವರ ಮತದಾನದ ಉತ್ಸುಕತೆಯನ್ನು ಕೊಂಡಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details