ಉಡುಪಿ: ಭಾನುವಾರ ಸಂಜೆ ಗುಡುಗು, ಸಿಡಿಲಿನಬ್ಬರಕ್ಕೆ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಂಭವಿಸಿದೆ.
ಉಡುಪಿ: ಮನೆಯಲ್ಲಿದ್ದ ಯುವಕನಿಗೆ ಸಿಡಿಲು ಬಡಿದು ಸಾವು - man death news kapu
ಸಿಡಿಲಿನಬ್ಬರಕ್ಕೆ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಂಭವಿಸಿದೆ.

ಸಿಡಿಲಿನಬ್ಬರಕ್ಕೆ ಯುವಕ ಬಲಿ
ಮೃತ ಯುವಕನನ್ನು ಕಟಪಾಡಿ ಜೆ.ಎನ್. ನಗರ ಪಡು ಏಣಗುಡ್ಡೆ ನಿವಾಸಿ ಸುರೇಶ್ ಅವರ ಪುತ್ರ ಭರತ್ (22)ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮಳೆಯೊಂದಿಗೆ ಭೀಕರ ಗುಡುಗು ಮತ್ತು ಸಿಡಿಲು ಕೂಡ ಇದ್ದು ಈ ವೇಳೆ ಮನೆಯಲ್ಲಿ ಕುಳಿತಿದ್ದ ವೇಳೆ ಮನೆಗೆ ಸಿಡಿಲು ಬಡಿದಿದೆ. ಇದರಿಂದ ಆಘಾತಗೊಂಡ ಭರತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಮೃತಪಟ್ಟಿದ್ದಾನೆ.
ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.