ಕರ್ನಾಟಕ

karnataka

ETV Bharat / state

ಸಿಡಿಮದ್ದು ಸ್ಫೋಟ ಮೀನು ಹಿಡಿಯಲು ಹೋದ ಯುವಕ ಸಾವು! - ಉಡುಪಿಯಲ್ಲಿ ಸಿಡಿಮದ್ದು ಯುವಕ ಸಾವು

ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಮೀನು ಹಿಡಿಯಲು ಹೋದ ಯುವಕ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುರ್ಪಾಡಿಯಲ್ಲಿ ನಡೆದಿದೆ.

ಶ್ರೇಯಸ್ ಶೇರಿಗಾರ್

By

Published : Nov 6, 2019, 12:23 PM IST

ಉಡುಪಿ: ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಮೀನು ಹಿಡಿಯಲು ಹೋದ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುರ್ಪಾಡಿಯಲ್ಲಿ ನಡೆದಿದೆ.

ಕಳ್ತೂರು ನಿವಾಸಿ ಶ್ರೇಯಸ್ ಶೇರಿಗಾರ್ (20)ಮೃತಪಟ್ಟ ಯುವಕ. ಶ್ರೇಯಸ್​ ಹಾಗೂ ಆತನ ನಾಲ್ಕು ಮಂದಿ ಸ್ನೇಹಿತರು ಸೀತಾನದಿಯಲ್ಲಿ ಮೀನು ಹಿಡಿಯಲು‌ ಹೋಗಿದ್ದರು. ಈ ವೇಳೆ ಶ್ರೇಯಸ್ ಸಿಡಿಮದ್ದು ಎಸೆದು, ಮೀನು‌ ಹಿಡಿಯಲು‌ ನದಿಗೆ ಹಾರಿದ್ದಾನೆ. ದುರಾದೃಷ್ಟವಶಾತ್ ಈತ​ ಹಾರಿದ ಸಮಯದಲ್ಲೇ ಸಿಡಿಮದ್ದು ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details