ಉಡುಪಿ: ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತಿನಂತೆ ವಿಶ್ವದ ಎರಡನೇ ಎತ್ತರದ ಮೋಟಾರ್ ಮಾರ್ಗವಾದ ಲಡಾಕ್ನ ಖರ್ದುಂಗ್ಲಾ ಪಾಸ್ ನ ತುತ್ತ ತುದಿಗೆ ಬೈಕ್ ಮೂಲಕ ಕುಂದಾಪುರದ 54 ವರ್ಷದ ಮಹಿಳೆ ವಿಲ್ಮಾ ಕ್ಯಾಸ್ಟೊ ಕರ್ವಾಲೊ ತಲುಪಿ ಸಾಧನೆ ಮಾಡಿದ್ದಾರೆ.
ಖರ್ದುಂಗ್ಲಾ ಪಾಸ್‌ನ ತುತ್ತತುದಿ ತಲುಪಿದ ಧೀರೆ ಹೌದು, ಲಡಾಖ್‌ನ 17,982 ಅಡಿ ಎತ್ತರದ ಖರ್ದುಂಗ್ಲಾ ಪಾಸ್‌ನ ತುತ್ತತುದಿಗೆ ಬೈಕ್‌ನಲ್ಲಿ ತಲುಪುವ ಮೂಲಕ ಪುರುಷರೂ ಅಚ್ಚರಿಪಡುವಂಥಾ ಸಾಧನೆ ಮಾಡಿದ್ದಾರೆ. ಪುತ್ರಿ ಚೆರಿಶ್ ಕರ್ವಾಲೊ ಜೊತೆ ಬೈಕ್‌ನಲ್ಲಿ ಹೊರಟು 900 ಕಿ.ಮೀ ಪ್ರಯಾಣಿಸಿದ್ದಾರೆ. ಸುಮಾರು 500 ಕಿ.ಮೀ.ವರೆಗೆ ವಿಲ್ಮಾ ಅವರೇ ಬೈಕ್ ಚಲಾಯಿಸಿದ್ದಾರೆ.
ಇದನ್ನೂ ಓದಿ:ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರ್ಪಡೆ: ಶಾಸಕ ಸತೀಶ್ ರೆಡ್ಡಿ ಆಕ್ರೋಶ
ಕಳೆದ ಬಾರಿ ಹೊರಟಾಗ ಬೈಕ್ ಹಾಳಾಗಿ ಹಿಂದಿರುಗಿದ್ದರು. ಆದರೆ, ಈ ಬಾರಿ ವಿಲ್ಮಾ ಈ ಸಾಹಸದಲ್ಲಿ ಯಶಸ್ಸು ಕಂಡಿದ್ದಾರೆ. ಸುಮಾರು -40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಅತಿ ಕಡಿಮೆ ಆಮ್ಲಜನಕದ ಲಭ್ಯತೆಯ ನಡುವೆ ವಿಲ್ಮಾ ಅವರು ಖರ್ದುಂಗ್ಲಾ ಪಾಸ್ ಹಾದಿಯಲ್ಲಿ ಪ್ರಯಾಣಿಸಿದ್ದಾರೆ. ವಿಲ್ಮಾ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಕಾರ್ಪೊರೇಟ್ ತರಬೇತುದಾರಾಗಿದ್ದಾರೆ.