ಉಡುಪಿ:ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಪರ್ಸಿಯನ್ ಬೋಟ್ ಅವಘಡಕ್ಕೀಡಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಬೋಟ್ನಲ್ಲಿ ತಾಂತ್ರಿಕ ಸಮಸ್ಯೆ: ಸಮುದ್ರ ಮಧ್ಯದಲ್ಲೇ ನಿಂತ ಬೋಟ್ - Boat standing in the middle of the sea
ಉಡುಪಿಯ ಮಲ್ಪೆ ಬಂದರಿನಿಂದ ಒಂದು ದಿನದ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಗೀಡಾಗಿದೆ.
ಉಡುಪಿಯ ಮಲ್ಪೆ ಬಂದರಿನಿಂದ ಒಂದು ದಿನದ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಗೀಡಾಗಿದೆ. ಶ್ರೀಕಾಂತ ಪುತ್ರನ್ ಎಂಬುವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್ ಇದಾಗಿದ್ದು, ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಸೈಂಟ್ ಮೇರಿಸ್ ದ್ವೀಪದ ಬಳಿ ಆಂಗ್ಲರ್ ಮತ್ತು ಸ್ಟೇರಿಂಗ್ ತುಂಡಾಗಿ ಬೋಟ್ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿತ್ತು. ಇತರೆ ಬೋಟ್ಗಳು ತೆರಳಿ ಬೋಟಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಬೋಟ್ ನಲ್ಲಿ 29 ಮೀನುಗಾರರು ಸಮುದ್ರಕ್ಕೆ ತೆರಳಿದ್ದರು. ಸೈಂಟ್ ಮೇರಿಸ್ ದ್ವೀಪದ ಬಳಿ ಪರ್ಸಿಯನ್ ಬೋಟಿನ ಸ್ಟೇರಿಂಗ್ ಕಟ್ ಆಗಿದೆ. ಕೂಡಲೇ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿಯನ್ನು ರವಾನೆ ಮಾಡಲಾಗಿದೆ. ಅಷ್ಟರಲ್ಲಿ ಸ್ಥಳೀಯ ಮೀನುಗಾರರು ಕೂಡ ಸ್ಥಳಕ್ಕೆ ಧಾವಿಸಿ ದೋಣಿಗಳ ಮೂಲಕ ಸೈಂಟ್ ಮೇರೀಸ್ ದ್ವೀಪಕ್ಕೆ ಬೋಟ್ ನಲ್ಲಿದ್ದವರನ್ನು ರಕ್ಷಿಸಿ ಕಳುಹಿಸಲಾಯಿತು. ಸುಮಾರು ಒಂದು ಕೋಟಿ 20 ಲಕ್ಷ ರುಪಾಯಿಯಷ್ಟು ನಷ್ಟವಾಗಿದೆ ಎಂದು ಪಾಲುದಾರರು ಮಾಹಿತಿ ನೀಡಿದ್ದಾರೆ.