ಉಡುಪಿ: ತೋಟಕ್ಕೆ ಮೇಯಲು ಬಂದ ಹಸುಗಳ ಮೇಲೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ಳಾಲ ಗ್ರಾಮದ ಅಂಗಡಿ ಜಡ್ಡು ನಿವಾಸಿ ನರಸಿಂಹ ಎಂಬಾತ ಕೋವಿಯಿಂದ ಹಸುಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಇಲ್ಲಿನ ಗುಲಾಬಿ ಎಂಬವರ ಹಸುಗಳು ಮೇಯುತ್ತಾ ನರಸಿಂಹ ಎಂಬವರ ತೋಟಕ್ಕೆ ಬಂದಿದೆ. ಇದರಿಂದ ಕೋಪಗೊಂಡ ತೋಟದ ಮಾಲೀಕ ನರಸಿಂಹ ಹಸುಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಇದರಿಂದಾಗಿ ಎರಡು ಹಸುಗಳು ಸಾವನ್ನಪ್ಪಿವೆ. ಒಟ್ಟು ಆರು ಹಸುಗಳು ಗಾಯಗೊಂಡಿವೆ. ಇದುವರೆಗೆ ನಾಲ್ಕು ಹಸುಗಳನ್ನು ಹತ್ಯೆ ಮಾಡಿರುವುದಾಗಿ ಮಹಿಳೆ ದೂರಿದ್ದಾರೆ.