ಕುಂದಾಪುರ (ಉಡುಪಿ): ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಲ್ಲಿನ ತಲ್ಲೂರು ಜಂಕ್ಷನ್ ಸಮೀಪ ಬುಧವಾರ ರಾತ್ರಿ ನಡೆದಿದೆ.
ತಲ್ಲೂರಿನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸಾವು ತಲ್ಲೂರಿನ ನಿವಾಸಿ, ಕುಂದಾಪುರದಲ್ಲಿ ವರ್ತಕರಾಗಿರುವ ಸೀತಾರಾಮ ಶೆಟ್ಟಿ (55) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಪಿಕಪ್ ವಾಹನವೊಂದು ತಲ್ಲೂರು ಜಂಕ್ಷನ್ನಲ್ಲಿ ರಸ್ತೆ ವಿಭಜಕದ ಮೇಲೆರಿದೆ. ಇದೇ ವೇಳೆ ಕುಂದಾಪುರದಿಂದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸೀತಾರಾಮ ಶೆಟ್ಟಿ ಪಿಕಪ್ ವಾಹನವನ್ನು ನೋಡಲು ತಮ್ಮ ಬೈಕ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ತಲ್ಲೂರಿನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸಾವು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.