ಉಡುಪಿ: ಹೊಟ್ಟೆಪಾಡಿಗಾಗಿ ಜನರು ನಾನಾ ವೇಷ ಹಾಕೋದು ಸಾಮಾನ್ಯ. ಆದರೆ, ಉಡುಪಿಯ ಯುವಕರು ಬಾಲಕಿಯೊಬ್ಬಳ ಕಿಡ್ನಿ ಚಿಕಿತ್ಸೆಗಾಗಿ ವೇಷ ಹಾಕಿ ಧನ ಸಹಾಯ ಮಾಡಲು ಮುಂದಾಗಿದ್ದಾರೆ.
ಬಾಲಕಿಗೆ ಚಿಕಿತ್ಸೆ ಕೊಡಿಸಲು ವೇಷ ಹಾಕಿದ ಉಡುಪಿಯ ಯುವ ಟೈಗರ್ಸ್ ತಂಡ.. - youth tigers team, udupi
15 ವರ್ಷದ ಬಾಲಕಿಯೊಬ್ಬಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಗೆ ಸಹಾಯ ಮಾಡಲು ಉಡುಪಿಯ ಟೈಗರ್ಸ್ ತಂಡವೊಂದು ಮುಂದೆ ಬಂದಿದೆ.
![ಬಾಲಕಿಗೆ ಚಿಕಿತ್ಸೆ ಕೊಡಿಸಲು ವೇಷ ಹಾಕಿದ ಉಡುಪಿಯ ಯುವ ಟೈಗರ್ಸ್ ತಂಡ..](https://etvbharatimages.akamaized.net/etvbharat/prod-images/768-512-4688873-thumbnail-3x2-.jpg)
ಉಡುಪಿಯ ಯುವ ಟೈಗರ್ಸ್ ತಂಡ
ಉಡುಪಿಯ ಯುವ ಟೈಗರ್ಸ್ ತಂಡ..
ಉಡುಪಿಯ ಸಾಯಿಬ್ರಕಟ್ಟೆಯ ಸಿಂಚನಾ 15ವರ್ಷದ ಬಾಲಕಿ, ಈಕೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಬಾಲಕಿಯ ಪೋಷಕರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದ ಕಾರಣ, ಉಡುಪಿಯ ಯುವ ಟೈಗರ್ಸ್ ತಂಡ ಈ ರೀತಿ ಹಣ ಕೂಡಿಸಿ ಸಿಂಚನಾಗೆ ಚಿಕಿತ್ಸೆ ಕೊಡಿಸಲಿದೆ.