ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಒಂದಾದ ಜೋಡಿ: ಸಾರ್ಥಕ ಜೀವನಕ್ಕೆ ಒಟ್ಟಿಗೇ ವಿದಾಯ ಹೇಳಿದ ದಂಪತಿ - ಕೃಷ್ಣ ಶೆಟ್ಟಿ ಯಾನೆ ಕುಟ್ಟಿ ಶೆಟ್ಟಿ

ವಯೋಸಹಜವಾಗಿ ಸಾವನ್ನಪ್ಪಿದ್ದ ಕೃಷ್ಣ ಶೆಟ್ಟಿ ಅವರ ಮೃತದೇಹವನ್ನು ಮನೆಯೊಳಗೆ ತಂದು ಇಟ್ಟ ಕೆಲವೇ ಕ್ಷಣಗಳನ್ನು ಪತ್ಮಿ ರೇವತಿ ಶೆಟ್ಟಿ ಕೂಡ ಕೊನೆಯುಸಿರೆಳೆದಿದ್ದು, ಸಾವಿನಲ್ಲೂ ಜೋಡಿ ಒಂದಾಗಿದ್ದಾರೆ.

Krishna Shetty and Revathi Shetty
ಕೃಷ್ಣ ಶೆಟ್ಟಿ ಹಾಗೂ ರೇವತಿ ಶೆಟ್ಟಿ

By

Published : Aug 5, 2022, 1:28 PM IST

ಕಾಪು(ಉಡುಪಿ):ತಾಲೂಕಿನ ಬೆಳಪು ಗ್ರಾಮದ ಕೃಷ್ಣ ಶೆಟ್ಟಿ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾಗಿದ್ದಾರೆ. ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದರೆ, ಅವರ ಪತ್ನಿ ರೇವತಿ ಕೆ. ಶೆಟ್ಟಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಸಾವಿನಲ್ಲೂ ಈ ಜೋಡಿ ಒಂದಾಗಿದೆ.

ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋಸಹಜವಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು, ಮಕ್ಕಳು ಮುಂಬಯಿ ಸಹಿತ ಬೇರೆ ಕಡೆಗಳಲ್ಲಿ ಇರುವುದರಿಂದ ಅವರ ಶವವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿತ್ತು. ಬುಧವಾರ ಮುಂಜಾನೆ ಮಕ್ಕಳು ಮನೆಗೆ ಬರುತ್ತಲೇ ಅವರ ಮೃತದೇಹವನ್ನು ಅವರ ಸ್ವಂತ ಮನೆಗೆ ತರಲಾಗಿತ್ತು. ಮೃತದೇಹವನ್ನು ಮನೆಯೊಳಗೆ ತಂದ ಕೆಲವೇ ಕ್ಷಣಗಳಲ್ಲಿ ಪತ್ನಿ ರೇವತಿ ಶೆಟ್ಟಿ ಅವರು ಕುಸಿದು ಬಿದ್ದು, ಮೃತ ಪಟ್ಟಿದ್ದಾರೆ.

ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ :ಹಾವು ಕಚ್ಚಿ ಮೃತಪಟ್ಟ ಅಣ್ಣ; ಅಂತ್ಯಕ್ರಿಯೆಗೆ ಬಂದ ತಮ್ಮನಿಗೂ ಹಾವು ಕಡಿದು ಸಾವು

ABOUT THE AUTHOR

...view details