ಕರ್ನಾಟಕ

karnataka

ETV Bharat / state

ಉಡುಪಿ: ಆಟ ಆಡೋಕೆ ತೆರಳಿದ್ದ ಬಾಲಕ ಹೊಂಡಕ್ಕೆ ಬಿದ್ದು ಸಾವು - ಮೃತ ಬಾಲಕ ಲಾರೆನ್​ ಲೂವಿಸ್​

ಮನೆಯ ಪಕ್ಕದಲ್ಲೇ ಆಟವಾಡುತ್ತಿದ್ದ ಬಾಲಕ ಹೊಂಡಕ್ಕೆ ಬಿದ್ದು ಸಾವು- ಅಪ್ಪ-ಅಮ್ಮನೊಟ್ಟಿಗೆ ಕುವೈತ್​ನಿಂದ​ ಬಂದಿದ್ದ 5 ವರ್ಷದ ಬಾಲಕ ಮೃತ - ಬ್ರಹ್ಮಾವರ ತಾಲೂಕಿನಲ್ಲಿ ದುರಂತ

dead boy Lauren Luwis
ಮೃತ ಬಾಲಕ ಲಾರೆನ್​ ಲೂವಿಸ್​

By

Published : Jul 14, 2022, 12:33 PM IST

ಉಡುಪಿ :ಆಟವಾಡಲೆಂದು ತೆರಳಿದ್ದ 5 ವರ್ಷದ ಬಾಲಕ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟುವಿನಲ್ಲಿ ನಡೆದಿದೆ. ಲಾರೆನ್ಸ್​ ಲೂವಿಸ್ ಮೃತ ಬಾಲಕನಾಗಿದ್ದು, ಉಪ್ಪೂರು ನಿವಾಸಿ ನೋರ್ಮನ್ ಮತ್ತು ಸಿಲ್ವಿಯ ಎಂಬವರ ಪುತ್ರನಾಗಿದ್ದಾನೆ.

ಇಂದು ಬೆಳಗ್ಗೆ ಮನೆಯ ಪಕ್ಕ ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಲಾರೆನ್ಸ್ ಕುಟುಂಬಸ್ಥರು ಕುವೈತ್​​ನಲ್ಲಿ ವಾಸವಾಗಿದ್ದು, ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು

ABOUT THE AUTHOR

...view details