ಕರ್ನಾಟಕ

karnataka

ETV Bharat / state

ಜನರು ನೋಡುತ್ತಿದ್ದಂತೆಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಶವ ಪತ್ತೆ - ಕುಂದಾಪುರದಲ್ಲಿ ನದಿಗೆ ಹಾರಿ ಉದ್ಯಮಿ ಸಾವು

ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆ ನಿವಾಸಿ, ಮುಂಬಯಿಯಲ್ಲಿ ಹಲವು ವರ್ಷಗಳಿಂದ ಹೊಟೇಲ್‌ ಉದ್ಯಮಿಯಾಗಿದ್ದ ಕೆ.ಜಿ. ಗಣೇಶ್‌ (50) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

By

Published : Jan 28, 2020, 2:39 AM IST

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ನದಿಯ ಹತ್ತಿರ ಜನರು ನೋಡುತ್ತಿದ್ದಂತೆಯೇ ಹೊಟೇಲ್‌ ಉದ್ಯಮಿಯೊಬ್ಬರು ನದಿಗೆ ಹಾರಿದ ಘಟನೆ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ – ಹೇರಿಕುದ್ರು ಸೇತುವೆಯಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದ್ದು, ಅವರ ಶವ ಸೋಮವಾರ ಪತ್ತೆಯಾಗಿದೆ.

ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆ ನಿವಾಸಿ, ಮುಂಬಯಿಯಲ್ಲಿ ಹಲವು ವರ್ಷಗಳಿಂದ ಹೊಟೇಲ್‌ ಉದ್ಯಮಿಯಾಗಿದ್ದ ಕೆ.ಜಿ. ಗಣೇಶ್‌ (50) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿ ಜನರು ಹೇಳುವ ಪ್ರಕಾರ, ಕುಂದಾಪುರ ಕಡೆಯಿಂದ ರಿಕ್ಷಾದಲ್ಲಿ ಬಂದಿದ್ದ ಅವರು ಸೇತುವೆಯಿಂದ ಸ್ವಲ್ಪ ದೂರು ಇಳಿದಿದ್ದರು. ಬಳಿಕ ಸೇತುವೆವರೆಗೆ ನಡೆದುಕೊಂಡು ಬಂದು, ಪರ್ಸ್‌, ವಾಚ್‌, ಕನ್ನಡಕ, ಚಪ್ಪಲಿ ಮುಂತಾದ ವನ್ನು ತೆಗೆದಿರಿಸಿ ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದವರು 2-3 ದೋಣಿಯಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಪರ್ಸ್‌ನಲ್ಲಿದ್ದ ಆಧಾರ್‌ ಕಾರ್ಡ್‌ ಛಾಯಾಪ್ರತಿಯಿಂದಾಗಿ ಅವರ ಗುರುತು ಪತ್ತೆಹಚ್ಚಲಾಗಿದೆ. ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ.ಎನ್‌. ಮೊಗೇರ ನೇತೃತ್ವದಲ್ಲಿ ಭಾನುವಾರ ರಾತ್ರಿಯವರೆಗೂ ಪತ್ತೆ ಕಾರ್ಯ ನಡೆಯಿತು. ಸ್ಥಳೀಯರು ಕೂಡ ಸಹಕರಿಸಿದ್ದರು. ನಂತರ ಸೋಮವಾರ ಮೃತ ದೇಹ ಪತ್ತೆಯಾಗಿದೆ.

ಸುಮಾರು 25 ವರ್ಷಗಳಿಂದ ಮುಂಬಯಿಯಲ್ಲಿ ಹೊಟೇಲ್‌ ಉದ್ಯಮಿಯಾಗಿದ್ದ ಗಣೇಶ್‌, 4-5 ವರ್ಷಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಅಲ್ಲಿದ್ದ ಹೊಟೇಲನ್ನು ಈಗ ಲೀಸ್‌ಗೆ ಕೊಟ್ಟಿದ್ದರು. ಊರಲ್ಲಿಯೂ ಬಾಡಿಗೆಗೆ ರೂಂಗಳನ್ನು ನೀಡಿದ್ದರು. ಆರ್ಥಿಕವಾಗಿ ಅನುಕೂಲಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಿನ ಕೆಲವು ದಿನಗಳಿಂದ ಖಿನ್ನತೆಗೆ ಒಳ ಗಾಗಿದ್ದ ಅವರು”ನಾನು ಒಂದಲ್ಲ ಒಂದು ಸತ್ತೆ ಸಾಯುತ್ತೇನೆ” ಎಂದು ಹೇಳುತ್ತಿದ್ದರು ಎಂದು ಅವರ ಮಿತ್ರರರು ಹೇಳುತ್ತಿದ್ದಾರೆ.

ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details