ಕರ್ನಾಟಕ

karnataka

ETV Bharat / state

ಹಿಜಾಬ್​ಗೆ ಅವಕಾಶ ಕೊಡುವಂತೆ ಧಮ್ಕಿ: ಪ್ರಿನ್ಸಿಪಾಲ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್ - ಹಿಜಾಬ್​ಗೆ​ ಅವಕಾಶ ಕೊಡುವಂತೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

ಕುಂದಾಪುರದ ಆರ್ ಎನ್ ಶೆಟ್ಟಿ ಕಾಲೇಜಿನ ಪ್ರಿನ್ಸಿಪಾಲರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿನ್ಸಿಪಾಲ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್
ಪ್ರಿನ್ಸಿಪಾಲ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

By

Published : Mar 1, 2022, 8:09 AM IST

ಉಡುಪಿ: ಹಿಜಾಬ್ ಹಾಕಲು ಅವಕಾಶ ನೀಡದಿದ್ದರೆ ಕೊಲೆ ಮಾಡುವುದಾಗಿ ಕುಂದಾಪುರದ ಆರ್.ಎನ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆವೊಡ್ಡಿದ್ದ ಅರೋಪಿಯನ್ನು ಬಂಧಿಸಲಾಗಿದೆ. ಇಂಟರ್ನೆಟ್ ಕರೆಯ ಮೂಲಕ ಬೆದರಿಕೆ ಹಾಕಿದ್ದ ದುಷ್ಕರ್ಮಿಯ ಕರೆಯ ಜಾಡು ಹಿಡಿದು ಬಂಧಿಸಲಾಗಿದೆ. ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹಮ್ಮದ್ ಶಬೀರ್ ಬಂಧಿತ ಆರೋಪಿ.

ಪ್ರಾಂಶುಪಾಲರಿಗೆ ಕರೆ ಮಾಡಿ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಆರೋಪಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿಬಂದಿತ್ತು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್​.. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 105 ರೂ. ಏರಿಕೆ!)

ABOUT THE AUTHOR

...view details