ಕರ್ನಾಟಕ

karnataka

ETV Bharat / state

ಧಾರಾಕಾರ ಮಳೆಯಲ್ಲೇ ವಿದ್ಯಾರ್ಥಿಗಳ ಪಥಸಂಚಲನ: ಕೈಕೊಟ್ಟ ಜಾಗೃತಿ ಸಾರುವ ಟ್ಯಾಬ್ಲೋ - 73ನೇ ಸ್ವಾತಂತ್ರ್ಯ ದಿನಾಚರಣೆ

ಧಾರಾಕಾರ ಮಳೆಯಲ್ಲಿಯೇ ಉಡುಪಿ ಜಿಲ್ಲಾಡಳಿತ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಪಥಸಂಚಲನಕ್ಕೆ ಬಂದಿದ್ದ ಟ್ಯಾಬ್ಲೋ ಕೆಟ್ಟು ನಿಂತು ನಿರಾಸೆ ಮೂಡಿಸಿತು.

ಉಡುಪಿಯ ಜಿಲ್ಲಾಡಳಿತದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ

By

Published : Aug 15, 2019, 9:41 PM IST

ಉಡುಪಿ:ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿಯೇ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾಡಳಿತ ಆಚರಿಸಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.

ಉಡುಪಿ ಜಿಲ್ಲಾಡಳಿತದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ

ಜಲ ವರ್ಷ 2019 - ಮಳೆ ನೀರು ಸಂರಕ್ಷಣೆಯನ್ನು ಸಾರುವ ಟ್ಯಾಬ್ಲೋವನ್ನು ಜಿಲ್ಲಾಡಳಿತದಿಂದ ಪಥಸಂಚಲನಕ್ಕಾಗಿ ಸಿದ್ಧಪಡಿಸಲಾಗಿತ್ತು. ಆದರೆ, ಪಥಸಂಚಲನ ಪ್ರಾರಂಭವಾಗುವ ಮುನ್ನವೇ ಟ್ಯಾಬ್ಲೋ ಕೆಟ್ಟು ನಿಂತಿತು. ಇದರಿಂದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿಯೇ ತಳ್ಳಿಕೊಂಡು ಹೋಗಬೇಕಾಯಿತು.

ABOUT THE AUTHOR

...view details