ಕರ್ನಾಟಕ

karnataka

ETV Bharat / state

ನಿಪ್ಪಾಣಿಯಲ್ಲಿ 2 ದಿನದಿಂದ ಬಸ್​​ನಲ್ಲೇ ತಂಗಿರುವ 7 ತಿಂಗಳ ಗರ್ಭಿಣಿ - ಕೊಲ್ಲಾಪುರ

ಲಾಕ್​​ಡೌನ್​ ಸಡಿಲಿಕೆಯಾದರೂ ಉಡುಪಿ ಮೂಲದ 30 ಜನರು ನಿಪ್ಪಾಣಿ ಗಡಿಯಲ್ಲಿ ಸಿಲುಕಿದ್ದಾರೆ. ಇದರಲ್ಲಿ 7 ತಿಂಗಳ ಗರ್ಭಿಣಿ ಸಹ ಸಿಲುಕಿದ್ದು, ಕಳೆದೆರಡು ದಿನದಿಂದ ಬಸ್​​​​​ನಲ್ಲಿಯೇ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಾನು ಕ್ವಾರಂಟೈನ್​ನಲ್ಲಿರಲು ಸಿದ್ಧ ನನ್ನನ್ನು ಉಡುಪಿಗೆ ತಲುಪಿಸಿ ಎಂದು ಗರ್ಭಿಣಿ ಮನವಿ ಮಾಡಿಕೊಂಡಿದ್ದಾರೆ.

7 months pregnant from udupi stuck in Nippani border
ನಿಪ್ಪಾಣಿಯಲ್ಲಿ ಸಿಲುಕಿ 2 ದಿನದಿಂದ ಬಸ್​​ನಲ್ಲೇ ತಂಗಿರುವ ಉಡುಪಿಯ 7 ತಿಂಗಳ ಗರ್ಭಿಣಿ

By

Published : May 20, 2020, 10:44 PM IST

ಉಡುಪಿ:ಮಹಾರಾಷ್ಟ್ರದಿಂದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗೆ ಹೊರಟ 30 ಮಂದಿ ನಿಪ್ಪಾಣಿಯಲ್ಲಿ ಸಿಲುಕಿದ್ದಾರೆ. ಉಡುಪಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ 7 ತಿಂಗಳ ಗರ್ಭಿಣಿ ದೀಪಿಕಾ ಶೆಟ್ಟಿ ಕಳೆದ ಎರಡು ದಿನಗಳಿಂದ ಬಸ್​​​​ನಲ್ಲೇ ತಂಗಿದ್ದಾರೆ.

ಕೊಲ್ಹಾಪುರ ಪೆಟ್ರೋಲ್ ಪಂಪ್​ನಲ್ಲಿಯೇ ಎರಡು ದಿನ ಕಳೆದ 30 ಜನ, ಕೊಲ್ಹಾಪುರ ಲಾಡ್ಜ್​​​​ನಿಂದ ರಾತ್ರಿ 1.30 ಕ್ಕೆ ಜನರನ್ನು ಪೊಲೀಸರು ಖಾಲಿ ಮಾಡಿಸಿದ್ದಾರೆ. ಮಹಾರಾಷ್ಟ್ರ ಪಾಸ್ ಪಡೆದು ಕರಾವಳಿ ಕಡೆ ಹೊರಟಿದ್ದ 30 ಜನರಿಗೆ ಸೇವಾ ಸಿಂಧು ಪಾಸ್ ಇಲ್ಲದೆ ಕರ್ನಾಟಕ ಪ್ರವೇಶ ನಿರಾಕರಿಸಲಾಗಿದೆ.

ಬೆಳಗಾವಿ ಪೊಲೀಸರಿಂದ ಪ್ರವೇಶ ನಿರಾಕರಿಸಲಾಗಿದೆ. ಏಳು ತಿಂಗಳ ಗರ್ಭಿಣಿ ಕುಕ್ಕೆಹಳ್ಳಿ ನಿವಾಸಿಯಾಗಿದ್ದು, ಗರ್ಭಿಣಿಯನ್ನು ಉಡುಪಿಗೆ ಕಳುಹಿಸಿಕೊಡಲು ಒತ್ತಾಯಿಸಲಾಗಿದೆ. ಇನ್ನು ಉಡುಪಿಯಲ್ಲಿ ಕ್ವಾರಂಟೈನ್​​ಗೆ ಸಿದ್ಧ ಎಂದು ಗರ್ಭಿಣಿ ಒಪ್ಪಿಕೊಂಡಿದ್ದು ಉಡುಪಿಗೆ ಕಳುಹಿಸಿಕೊಡಲು ವಿನಂತಿಸಿದ್ದಾರೆ.

ABOUT THE AUTHOR

...view details