ಉಡುಪಿ:ಉಡುಪಿಯಲ್ಲಿಂದು 45 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು 45 ಮಂದಿಗೆ ಕೊರೊನಾ ಪಾಸಿಟಿವ್ - Corona Latest News
ಉಡುಪಿಯಲ್ಲಿ ಇಂದೂ ಸಹ ಕೊರೊನಾ ಅಬ್ಬರ ಮುಂದುವರೆದಿದೆ. ಜಿಲ್ಲೆಯಲ್ಲಿ ಒಟ್ಟು 45 ಮಂದಿಗೆ ಪಾಸಿಟಿವ್ ಬಂದಿದ್ದು, ಅದರಲ್ಲಿ 44 ಜನ ಮುಂಬೈನಿಂದ ಬಂದಿದವರಾಗಿದ್ದಾರೆ.
ಉಡುಪಿಯಲ್ಲಿಂದೂ ಕೊರೊನಾ 'ಮಹಾ' ಆರ್ಭಟ: 45 ಮಂದಿಗೆ ಸೋಂಕು ದೃಢ
45 ಜನರ ಪೈಕಿ 44 ಜನ ಮುಂಬೈನಿಂದ ಬಂದವರಾಗಿದ್ದಾರೆ. ಓರ್ವ ಸ್ಥಳೀಯ ಮಗುವಿಗೂ ಪಾಸಿಟಿವ್ ಬಂದಿದೆ, ಇದು ಪಾಸಿಟಿವ್ ಬಂದಿದ್ದ ಲ್ಯಾಬ್ ಟೆಕ್ನಿಷಿಯನ್ ಅವರ ಮಗುವಾಗಿದೆ.
ಇಂದು 30 ಪುರುಷರು, 11 ಮಹಿಳೆಯರು ಮತ್ತು 4 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಹೊರರಾಜ್ಯಗಳಿಂದ ಬಂದವರ ಟೆಸ್ಟ್ ಇಂದಿಗೆ ಮುಕ್ತಾಯಗೊಳ್ಳುತ್ತಿದೆ ಎಂಬುದು ಸಮಾಧಾನದ ವಿಷಯ. ಇವತ್ತೂ ಕೂಡ 113 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈತನಕ 387 ಜನ ಗುಣಮುಖರಾಗಿರುವುದು ಸಂತಸದ ಸಂಗತಿ ಅಂತಾ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.