ಉಡುಪಿ: ಇಲ್ಲಿನ ಅಂಬಲಪಾಡಿ ಮಹಾಕಾಳಿ ದೇವಸ್ಥಾನ ಪರಿಸರದ ಮನೆ ಆವರಣದಲ್ಲಿ ಸೊಂಪಾಗಿ ಬೆಳೆದಿದ್ದ ಗಂಧದ ಮರವನ್ನು ಮೂವರು ಚೋರರು ಕ್ಷಣಮಾತ್ರದಲ್ಲಿ ಕಡಿದುಕೊಂಡು ಹೋಗಿದ್ದಾರೆ.
ಹಗಲು ಕುಂಟನಂತೆ ಬಂದ, ರಾತ್ರಿ ಗಂಧದ ಮರ ಕದ್ದ: ವಿಡಿಯೋ ನೋಡಿ - ಗಂಧದ ಮರ ಕಳ್ಳತನ
ಉಡುಪಿಯಲ್ಲಿ ಮೂವರು ಕಳ್ಳರ ತಂಡವೊಂದು ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರವನ್ನು ರಾತ್ರಿ ವೇಳೆ ಬಂದು ಕದ್ದುಕೊಂಡು ಹೋಗಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಹಗಲು ಹೊತ್ತಿನಲ್ಲಿ ಕುಂಟನ ವೇಷದಲ್ಲಿ ಕುಂಟುನೆಪ ಮಾಡಿಕೊಂಡು ಬಂದವನು ಕತ್ತಲಾಗುತ್ತಿದ್ದಂತೆ ಮರ ಕಡಿದುಕೊಂಡು ಹೋದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಗಲಿನಲ್ಲಿ ಭಿಕ್ಷೆ ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದಾತ, ಅದೇ ದಿನ ರಾತ್ರಿ ಒಂದು ಗಂಟೆ ಸುಮಾರಿಗೆ ಇತರ ಇಬ್ಬರೊಂದಿಗೆ ಬಂದು ಚಾಲಾಕಿತನದಿಂದ ಗಂಧದ ಮರ ಉರುಳಿಸಿದ್ದಾನೆ.
ಯಾರಿಗೂ ಸಂಶಯ ಬಾರದಂತೆ ಕ್ಷಣಮಾತ್ರದಲ್ಲಿ ಈ ಕೆಲಸ ಮುಗಿಸಿದ್ದಾನೆ. ಅಂದಾಜು ಒಂದು ಲಕ್ಷ ರೂ. ಮೌಲ್ಯದ ಈ ಗಂಧದ ಮರವನ್ನು ಮನೆ ತೋಟದಲ್ಲೇ ಬೆಳೆಸಲಾಗಿತ್ತು. ಮನೆಯಲ್ಲಿ ಜನರು ವಾಸವಿದ್ದರೂ ರಾಜಾರೋಷವಾಗಿ ಬಂದ ಚೋರರ ತಂಡ ತನ್ನ ಕೆಲಸ ಪೂರೈಸಿಕೊಂಡು ಹೋಗಿದೆ.