ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 47 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಮತ್ತೆ 27 ಕೊರೊನಾ ಕೇಸ್: ಸೋಂಕಿತರ ಸಂಖ್ಯೆ 47 ಕ್ಕೆ ಏರಿಕೆ - ಉಡುಪಿಯಲ್ಲಿ ಕೊರೊನಾ ಪ್ರಕರಣ
ಉಡುಪಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 47 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಒಟ್ಟು199 ಜನರ ವರದಿ ಬಂದಿದೆ. ಇವುಗಳಲ್ಲಿ ಇಂದು 27 ಪ್ರಕರಣಗಳು ಪಾಸಿಟಿವ್ ಎಂದು ದೃಢಪಟ್ಟಿದೆ. ಅದರಲ್ಲಿ ಮಹಾರಾಷ್ಟ್ರದಿಂದ ಬಂದ 23 ಜನರಿಗೆ ಸೋಂಕು ದೃಢವಾಗಿದೆ. ತೆಲಂಗಾಣದಿಂದ ಬಂದ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೇರಳದಿಂದ ಕೆಎಂಸಿಗೆ ಚಿಕಿತ್ಸೆಗಾಗಿ ಬಂದಿರುವ ಒಬ್ಬರಿಗೆ ಸೋಂಕು ತಗುಲಿದೆ. ಆರು ಮಂದಿ ಗಂಡಸರು, ಐವರು ಹೆಂಗಸರು ಸೋಂಕಿಗೆ ಗುರಿಯಾಗಿದ್ದಾರೆ. 16 ಜನ ಮಕ್ಕಳಲ್ಲಿ ಸೋಂಕು ಕೂಡ ಸೋಂಕು ಪತ್ತೆಯಾಗಿದೆ. ಇವರೆಲ್ಲರು ಕ್ವಾರಂಟೈನ್ನಲ್ಲಿ ಇದ್ದರು. ಎಲ್ಲರನ್ನೂ ಚಿಕಿತ್ಸೆಗಾಗಿ ಟಿಎಂಎಪೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ 27 ಮಂದಿಯ ಪೈಕಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಆಗಿದ್ದರು. ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ ಒಟ್ಟು 21 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು,ಮುಂಬೈ, ಠಾಣೆ, ಪಾಲ್ಗರ್, ಮಲ್ಲಚಾಂದಿವೇಲಿ, ಸಾಯಿಲ್, ಪೂನ, ಔರಂಗಾಬಾದ್ ಮೂಲದವರಾಗಿದ್ದಾರೆ. ಜಿಲ್ಲೆಯ 987 ಸ್ಯಾಂಪಲ್ ಪೈಕಿ 199 ಮಂದಿಯ ವರದಿ ಕೈ ಸೇರಿದ್ದು, ಜಿಲ್ಲೆಯಲ್ಲಿ ಒಟ್ಟು 47 ಕೊರೋನಾ ಪ್ರಕರಣ ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದು, ಈವರೆಗೆ ಮೂರು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.