ಕರ್ನಾಟಕ

karnataka

ETV Bharat / state

ಧಾರಾಕಾರ ಮಳೆಯಿಂದ 23 ಮನೆಗಳಿಗೆ ಹಾನಿ; ₹ 17 ಲಕ್ಷ ನಷ್ಟ ಸಾಧ್ಯತೆ - Heavy rainfall in udupi

ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಒಟ್ಟು 23 ಮನೆಗಳು, ಕೆಲವರ ಕೃಷಿ ತೋಟಗಳು ಮಳೆಯಿಂದ ನೆಲಕಚ್ಚಿದ್ದು, ರೈತರು ವ್ಯಾಪಕ ನಷ್ಟ ಅನುಭವಿಸಿದ್ದಾರೆ.

23 houses damaged due to torrential rain
ಮನೆ ಹಾನಿ

By

Published : Aug 7, 2020, 7:42 PM IST

ಉಡುಪಿ:ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಸರಾಸರಿ 68 ಮಿಲಿ ಮೀಟರ್​​ ಮಳೆ ದಾಖಲಾಗಿದೆ. ಉಡುಪಿ 52.3, ಕುಂದಾಪುರ 71, ಕಾರ್ಕಳದಲ್ಲಿ 73.5 ಮಿಮೀ ಮಳೆ ಬಿದ್ದಿದೆ.

ಮನೆಯ ಮೇಲೆ ಬಿದ್ದಿರುವ ಮರ

ಬ್ರಹ್ಮಾವರ ತಾಲೂಕಿನಲ್ಲಿ ಅಪಾರ ಕೃಷಿ ಹಾನಿ ಸಂಭವಿಸಿದ್ದು, ಹಿಲಿಯಾಣ ಗ್ರಾಮದಲ್ಲಿ ಅಡಿಕೆ ಬೆಳೆ ನೆಲಕಚ್ಚಿದೆ. ಪ್ರಮೋದ್ ಶೆಟ್ಟಿ, ಅಕ್ಕಮ್ಮ ಪೂಜಾರ್ತಿ, ವಿಶ್ವನಾಥ್, ಜಲಜಾಕ್ಷಿ ಶೆಡ್ತಿ ಅವರ ತೋಟ ಸೇರಿ ಒಟ್ಟು ಅಂದಾಜು ₹ 2.35 ಲಕ್ಷ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಹಾಗೆಯೇ ಬೈಂದೂರಿನ ಪ್ರದೀಪ್ ಭಟ್ ಅವರ ತೋಟ ನೀರು ಪಾಲಾಗಿದ್ದು, ಅಂದಾಜು ₹ 50 ಸಾವಿರ ನಷ್ಟವಾಗಿದೆ ಎನ್ನಲಾಗುತ್ತಿದೆ.

ಮನೆ ಹಾನಿ

ಜಿಲ್ಲೆಯಲ್ಲಿ 23 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಬೈಂದೂರು ತಾಲೂಕೊಂದರಲ್ಲೇ 12 ಮನೆಗಳಿಗೆ ಹಾನಿ ಸಂಭವಿಸಿದೆ. ಈ ಮನೆಗಳ ಹಾನಿಗೆ ಅಂದಾಜು ₹10.72 ಲಕ್ಷ, ಉಳಿದ 11 ಮನೆಗಳ ಹಾನಿಗೆ ಅಂದಾಜು ₹ 2.96 ಲಕ್ಷ ನಷ್ಟ ಸಂಭವಿಸಿದೆ. ದನದ ಕೊಟ್ಟಿಗೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ₹ 20 ಸಾವಿರ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.

ABOUT THE AUTHOR

...view details