ಕರ್ನಾಟಕ

karnataka

ಉಡುಪಿಯಲ್ಲಿ ಇಬ್ಬರು ಕೊರೊನಾ ವಾರಿಯರ್ಸ್ ಸೇರಿ 22 ಜನರಿಗೆ ಸೋಂಕು

By

Published : Jun 12, 2020, 2:14 AM IST

ಉಡುಪಿ ಜಿಲ್ಲೆಯಲ್ಲಿ ಒಟ್ಟು 658 ಜನರು ಕೊರೊನಾದಿಂದ ಗುಣಮುಖರಾಗಿದ್ದು, 308 ಪಾಸಿಟಿವ್​​ ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

22 people, including two Corona Warriors, have been infected today
ಉಡುಪಿಯಲ್ಲಿ ಇಂದು ಇಬ್ಬರು ಕೊರೊನಾ ವಾರಿಯರ್ಸ್ ಸೇರಿದಂತೆ 22 ಜನರಿಗೆ ಸೋಂಕು ಧೃಢ

ಉಡುಪಿ:ಜಿಲ್ಲೆಯಲ್ಲಿ ಇಬ್ಬರು ಕೊರೊನಾ ವಾರಿಯರ್ಸ್​ಗೆ ಸೋಂಕು ತಗಲಿದ್ದು, ಗುರುವಾರ 22 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಅದರಲ್ಲಿ ಮಹಾರಾಷ್ಟ್ರದಿಂದ ಬಂದ 20 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಬ್ಬರು ಸ್ಥಳೀಯ ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಪೈಕಿ 11 ಪುರುಷರು 9 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಎಲ್ಲರನ್ನೂ ಜೂನ್​ 5 ಮತ್ತು 6ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ರಾಜ್ಯಮಟ್ಟದಿಂದ ವರದಿಯು ಅಧಿಕೃತವಾಗಿ ಗುರುವಾರ ಬಂದಿದ್ದು, ನಾಲ್ಕು ದಿನಗಳ ಮೊದಲೇ ವರದಿಯು ಜಿಲ್ಲಾಡಳಿತದ ಕೈಸೇರಿತ್ತು.

ಜಿಲ್ಲೆಯಲ್ಲಿ ಒಟ್ಟು 658 ಜನರು ಕೊರೊನಾದಿಂದ ಗುಣಮುಖರಾಗಿದ್ದು, 308 ಪಾಸಿಟಿವ್​​ ಪ್ರಕರಣಗಳು ಸಕ್ರಿಯವಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ABOUT THE AUTHOR

...view details