ಕರ್ನಾಟಕ

karnataka

ETV Bharat / state

ಲಾಕ್​​ಡೌನ್ ಸದುಪಯೋಗ... 22 ಅಡಿ ಆಳದ ಬಾವಿ ಅಗೆದ ಕಾರ್ಕಳ ನಿವಾಸಿ - ಉಡುಪಿಯ ಕಾರ್ಕಳದ ಕುಂಟಾಲ್ಪಾಡಿ

ಕೊರೊನಾ ಲಾಕ್ ಡೌನ್ ಸದುಪಯೋಗವಾಗಬೇಕೆಂಬ ನಿಟ್ಟಿನಲ್ಲಿ ಇವರು 22 ಅಡಿ ಆಳದ ಬಾವಿಯನ್ನು ಯಾರ ಸಹಾಯವಿಲ್ಲದೇ, ಒಬ್ಬರೇ ಅಗೆದಿದ್ದಾರೆ.

well
well

By

Published : May 8, 2020, 7:50 AM IST

ಉಡುಪಿ: ಕಾರ್ಕಳದ ಕುಂಟಾಲ್ಪಾಡಿ ನಿವಾಸಿ ಗಣೇಶ್ ಅವರು 28 ದಿನಗಳಲ್ಲಿ 22 ಅಡಿ ಆಳದ ಬಾವಿ ಅಗೆದು, ಲಾಕ್ ಡೌನ್ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ.

22 ಅಡಿ ಆಳದ ಬಾವಿ

ವೃತ್ತಿಯಲ್ಲಿ ಎಸಿ ಮೆಕ್ಯಾನಿಕ್ ಆಗಿರುವ ಗಣೇಶ್ ಅವರು ಒಂದು ವರ್ಷದ ಹಿಂದೆಯಷ್ಟೇ ಹೊರ ದೇಶದಿಂದ ಊರಿಗೆ ಬಂದು ಹಾನೆಸ್ಟಿ ಎಂಬ ಬಟ್ಟೆ ಅಂಗಡಿ ಆರಂಭಿಸಿದ್ದರು.

ಬಾವಿ ಅಗೆದ ಕಾರ್ಕಳ ನಿವಾಸಿ ಗಣೇಶ್

ಕೊರೊನಾ ಕಾರಣದಿಂದ ಮನೆಯಲ್ಲೇ ಕುಳಿತಿದ್ದ ಇವರು ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ಆಲೋಚನೆಗೆ ಬಂದದ್ದೇ ಬಾವಿ ಅಗೆಯುವುದು.

ಬಾವಿ ಅಗೆದ ಕಾರ್ಕಳ ನಿವಾಸಿ
22 ಅಡಿ ಆಳದ ಬಾವಿ ಅಗೆದ ಕಾರ್ಕಳ ನಿವಾಸಿ

ತನ್ನ ಮನೆಯ ತೋಟದಲ್ಲಿ ಬಾವಿ ಅಗೆಯತೊಡಗುತ್ತಿದ್ದಂತೆ ಹತ್ತಿರದ ಮನೆಯವರು ಸಹಾಯಕ್ಕೆ ಬಂದಾಗ, ಅವರೆಲ್ಲರ ಉದಾರ ಮನಸ್ಸನ್ನು ಹೊಗಳುತ್ತಾ ತಾನೊಬ್ಬನೇ ಬಾವಿ ಅಗೆಯುತ್ತೇನೆ ಎಂದು ಹಠ ಹಿಡಿದು ಆರಂಭಿಸಿದ ಕೆಲಸವನ್ನು ಮುಂದುವರೆಸಿ, 28 ದಿನಗಳಲ್ಲಿ 22 ಅಡಿ ಆಳದ ಬಾವಿ ಅಗೆದು ಅದರಲ್ಲಿ ಸಿಕ್ಕಿದ ನೀರನ್ನು ಸುತ್ತಮುತ್ತಲ ಮನೆಗಳಿಗೂ ಹಂಚಿದ್ದಾರೆ.

ABOUT THE AUTHOR

...view details