ಉಡುಪಿ: ಜಿಲ್ಲೆಯಲ್ಲಿಂದು 219 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ
ಒಟ್ಟು ಸೋಂಕಿತರ ಸಂಖ್ಯೆ 6510ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ 219 ಜನರಿಗೆ ತಗುಲಿದ ಸೋಂಕು... ನಾಲ್ವರು ಬಲಿ! - Udupi corona case
ಮಹಾಮಾರಿ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. 219 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 6510ಕ್ಕೆ ಏರಿಕೆಯಾಗಿದೆ. ಈವರೆಗೆ 3768 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.
Udupi corona Case
ಕಾರ್ಕಳ ತಾಲೂಕಿನ 35 ವರ್ಷದ ವ್ಯಕ್ತಿ, ಬೈಂದೂರು ತಾಲೂಕಿನ 48 ವರ್ಷದ ವ್ಯಕ್ತಿ, ಉಡುಪಿ ತಾಲೂಕಿನ 66 ವರ್ಷದ ವೃದ್ಧ ಹಾಗು 41 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿ ಮೃತರ ಸಂಖ್ಯೆ 70 ಕ್ಕೆ ತಲುಪಿದೆ.
ಇಂದು 183 ಮಂದಿ ಡಿಸ್ಜಾರ್ಜ್ ಆಗಿದ್ದು,
ಈವರೆಗೆ ಜಿಲ್ಲೆಯಲ್ಲಿ ಒಟ್ಟು 3768 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2676 ಸಕ್ರಿಯ ಪ್ರಕರಣಗಳು ಇವೆ.