ಉಡುಪಿ:ಕಾರ್ಕಳ ತಾಲೂಕು ಕಾಬೆಟ್ಟಿನಲ್ಲಿ ಹಾಡಹಗಲೇ ಕಳ್ಳರು ಎರಡು ಲಕ್ಷ ಹಣ ದೋಚಿದ ಘಟನೆ ನಡೆದಿದೆ.
ಉಡುಪಿಯಲ್ಲಿ ಹಾಡಹಗಲೇ 2 ಲಕ್ಷ ಹಣ ದೋಚಿ ಬೈಕ್ನಲ್ಲಿ ಖದೀಮರು ಎಸ್ಕೇಪ್! - ಕಾರ್ಕಳ ತಾಲೂಕು ಕಾಬೆಟ್ಟಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಬೆಟ್ಟಿನಲ್ಲಿ ಹಾಡಹಗಲೇ ಕಳ್ಳರು ಎರಡು ಲಕ್ಷ ಹಣ ದೋಚಿದ ಘಟನೆ ನಡೆದಿದೆ.
ಉಡುಪಿಯಲ್ಲಿ ಹಾಡು ಹಗಲೇ 2 ಲಕ್ಷ ಹಣ ದೋಚಿದ ಬೈಕ್ನಲ್ಲಿ ಖದೀಮರು ಎಸ್ಕೇಪ್!
ಮಾಲಿನಿ ಕಾರ್ಕಳ ಎಂಬುವವರು ಸಿಂಡಿಕೇಟ್ ಬ್ಯಾಂಕ್ನಿಂದ ಡ್ರಾ ಮಾಡಿದ್ದ ಎರಡು ಲಕ್ಷ ರೂ. ಹಣವನ್ನು ಕಳ್ಳರು ಎಗರಿಸಿದ್ದಾರೆ. ಮಾಲಿನಿ ಕಾಬೆಟ್ಡು ರೇಷನ್ ಅಂಗಡಿ ಬಳಿ ತಮ್ಮ ವಾಹನದಲ್ಲಿ ಹಣ ಇರಿಸಿ ದಿನಸಿ ಸಾಮಾನು ಖರೀದಿಸುತ್ತಿದ್ದರು.
ಬ್ಯಾಂಕ್ನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಕಾರಿನಲ್ಲಿದ್ದ ಹಣ ದೋಚಿ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಬೈಕ್ ಹಿಂಬಾಲಿಸಿದರೂ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.