ಕರ್ನಾಟಕ

karnataka

ಉಡುಪಿಯಲ್ಲಿಂದು 15 ಹೊಸ ಕೇಸ್​ ಪತ್ತೆ: 162 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

By

Published : May 29, 2020, 5:46 PM IST

ಉಡುಪಿ ಜಿಲ್ಲೆಯಲ್ಲಿ ಇಂದು 15 ಹೊಸ ಕೊರೊನಾ ಕೇಸ್​ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 162 ಕ್ಕೆ ಏರಿಕೆಯಾಗಿದೆ.

15 New covid Case Detected In udupi
ಕೊರೊನಾ ಕೇಸ್

ಉಡುಪಿ: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 15 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 162 ಕ್ಕೆ ಏರಿಕೆಯಾಗಿದೆ.

ಇಂದು ಕಂಡು ಬಂದ ಪ್ರಕರಣಗಳಲ್ಲಿ ಎಲ್ಲರೂ‌ ಮುಂಬೈನಿಂದಲೇ ಬಂದವರು ಎಂದು ತಿಳಿದುಬಂದಿದೆ. ಎಂಟು ವರ್ಷದ ಸೋಂಕಿತ ಮಗುವಿನ ತಾಯಿಗೂ‌ ಕೂಡ ಕೊರೊನಾ ತಗುಲಿದೆ. ಮಗುವಿಗೆ ಕೆಲ ದಿನಗಳ ಹಿಂದೆ ಕೋವಿಡ್ -19 ಪತ್ತೆಯಾಗಿತ್ತು. ಈ ಹಿನ್ನೆಲೆ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನು ನೋಡಿಕೊಳ್ಳಲು ತಾಯಿಯೂ ಕೂಡ ಆಸ್ಪತ್ರೆಯಲ್ಲಿದ್ದರು. ಇದೀಗ 35 ವರ್ಷದ ತಾಯಿಗೂ ಕೂಡ ಕೊರೊನಾ ಕೋವಿಡ್​ ಸೋಂಕು ತಗುಲಿದೆ.

ಕ್ವಾರಂಟೈನ್ ನಿಯಮಾವಳಿ ಸಡಿಲಿಕೆಯಾದ ಕಾರಣ ಮನೆಗೆ ಹೋಗಿದ್ದ ವ್ಯಕ್ತಿ ಮತ್ತೆ ಕೂಡಲೇ ಕ್ವಾರಂಟೈನ್​ಗೆ ಮರಳಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಮನೆ ತಲುಪುವ ಮುಂಚೆಯೇ ಪಾಸಿಟಿವ್ ಎಂದು ವರದಿ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಯುವಕ ವಾಪಸ್​ ಬಂದಿದ್ದಾನೆ.

ABOUT THE AUTHOR

...view details