ಉಡುಪಿ: ಜಿಲ್ಲೆಯಲ್ಲಿಂದು 14 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 09 ಮಂದಿ ಮಹಾರಾಷ್ಟ್ರ ಹಾಗೂ ಓರ್ವ ಬೆಂಗಳೂರಿನಿಂದ ಬಂದಿರುವ ಸೋಂಕಿತರಾಗಿದ್ದಾರೆ. ಓರ್ವ ಸೋಂಕಿತನ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ, ಮೂವರಿಗೆ ರೋಗಿ ಸಂಖ್ಯೆ 3851ರ ಸಂಪರ್ಕದಿಂದ ಸೋಂಕು ಹರಡಿರುವುದನ್ನು ದೃಢಪಡಿಸಿದೆ.
ಉಡುಪಿಯಲ್ಲಿ ತಣ್ಣಗಾಗದ ಕೊರೊನಾ: ಇಂದು 14 ಪ್ರಕರಣ ದೃಢ - Corona Latest News
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಸಿದ್ದು, ಇಂದೂ ಸಹ 14 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,102ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ತಣ್ಣಗಾಗದ ಕೊರೊನಾ: ಇಂದು 14 ಪ್ರಕರಣ ದೃಢ
ಮತ್ತೋರ್ವ ಸೋಂಕಿತ ಮಹಿಳೆಯ ಟ್ರಾವಲ್ ಹಿಸ್ಟರಿ ಕಲೆ ಹಾಕುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,102ಕ್ಕೆ ಏರಿಕೆ ಕಂಡಿದೆ. ಸದ್ಯ ಜಿಲ್ಲೆಯಲ್ಲಿ 113 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.