ಕಾರ್ಕಳ (ಉಡುಪಿ): ಪುರಸಭೆ ವ್ಯಾಪ್ತಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 13 ಮಂದಿ ಮಂಗಳವಾರ ಬಿಡುಗಡೆ ಆಗಿದ್ದಾರೆ.
ಕಾರ್ಕಳ ಕ್ವಾರಂಟೈನ್ ಕೇಂದ್ರದಿಂದ 13 ಮಂದಿ ಡಿಸ್ಚಾರ್ಜ್
ಕರಾವಳಿ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದರೆ, ಇದೀಗ ಕಾರ್ಕಳದ ಕ್ವಾರಂಟೈನ್ ಸೆಂಟರ್ನಿಂದ 13 ಮಂದಿ ಬಿಡುಗಡೆಯಾಗಿದ್ದಾರೆ.
ಕಾರ್ಕಳದ ಕ್ವಾರಂಟೈನ್ ಕೇಂದ್ರದಲ್ಲಿದ್ದ 13 ಮಂದಿಗೆ ಬಿಡುಗಡೆ ಭಾಗ್ಯ
ಕ್ವಾರಂಟೈನ್ ಕೇಂದ್ರಗಳಾದ ಬಾಹುಬಲಿ ಪ್ರವಚನ ಮಂದಿರದಲ್ಲಿದ್ದ 7 ಮಂದಿ, ಜೈನ ಯಾತ್ರ ನಿವಾಸದಲ್ಲಿದ್ದ ಮೂವರು ಹಾಗೂ ತೆಳ್ಳಾರು ಶಬರಿ ಆಶ್ರಮದಲ್ಲಿದ್ದ 3 ಮಂದಿ ಸೇರಿ ಒಟ್ಟು 13 ಮಂದಿಗೆ ಸಸಿ ಕೊಟ್ಟು ಕಳುಹಿಸಲಾಯಿತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಪರಿಸರ ಅಭಿಯಂತರ ಕೆ. ಮದನ್, ಕಂದಾಯ ಅಧಿಕಾರಿ ಶಿವಕುಮಾರ್, ಬಿಜೆಪಿ ಮುಖಂಡ ಮಣಿರಾಜ್ ಶೆಟ್ಟಿ , ಸಂತೋಷ್, ಹರೀಶ್‌ಶೆಣೈ, ವಿನಾಯಕ ಮಲ್ಯ, ವಿಜಯ ಸಪಲಿಗ ಇದ್ದರು.