ಉಡುಪಿ:ಜಿಲ್ಲೆಯಲ್ಲಿಂದು 109 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,895ಕ್ಕೆ ಏರಿಕೆಯಾಗಿದೆ. ಹಲವು ದಿನಗಳ ನಂತರ ಒಂದೇ ದಿನ ಏರಿಕೆ ಕಂಡಿರುವ ಪಾಸಿಟಿವ್ ಪ್ರಕರಣಗಳಿಂದ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ.
ಉಡುಪಿಯಲ್ಲಿ ಒಂದೇ ದಿನ 109 ಮಂದಿಗೆ ಸೋಂಕು - Udupi latest news
ಜಿಲ್ಲೆಯಲ್ಲಿಂದು ಒಂದೇ 109 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,895ಕ್ಕೆ ಏರಿಕೆಯಾಗಿದೆ.
Udupi corona case
ಇನ್ನೊಂದೆಡೆ, ಇಂದು 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 594 ಮಂದಿಯ ವರದಿ ನಿರೀಕ್ಷಿಸಲಾಗಿದೆ.
ಇವತ್ತು ಬಂದಿರುವ 489 ಜನರ ವರದಿ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೊಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.