ಉಡುಪಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಅದನ್ನು ಮುಕ್ತ ಮಾಡಲು ಮಠದ ವತಿಯಿಂದ 10 ಲಕ್ಷ ದೇಣಿಗೆ ಕೊಡುತ್ತಿದ್ದೇವೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಕೊರೊನಾ ಮುಕ್ತವಾಗಿಸಲು ಉಡುಪಿ ಪುತ್ತಿಗೆ ಮಠದಿಂದ 10 ಲಕ್ಷ ದೇಣಿಗೆ - donation from Udupi Padatta Math
ಪ್ರಾಚೀನ ಮೌಲ್ಯಗಳನ್ನು ಬದಿಗಿಟ್ಟು, ಅನಗತ್ಯ ಪ್ರಾಣಿ ಸಂಹಾರದಿಂದ ಕೊರೊನಾ ಬಂದಿದೆ. ಈ ವೈರಸ್ ಜಗತ್ತನ್ನೇ ನಾಶಪಡಿಸಲಿದೆ ಎಂದು ದುಷ್ಟರಿಗೆ ಈಗ ಗೊತ್ತಾಗಿದೆ ಎಂದು ಸ್ವಾಮೀಜಿ ಹೇಳಿದರು.
ಕೊರೊನಾ ವೈರಸ್ ಅನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ. ವೈರಸ್ ನರಕಾಸುರನಂತೆ ಭಾಸವಾಗುತ್ತಿದೆ. ನರಕಾಸುರನ ಸಂಹರಿಸಲು ಕೃಷ್ಣನ ಅವತಾರ ಎತ್ತಬೇಕಿದೆ. ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ ಎಂದರು.
ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಕೊರೊನಾ ವಿರುದ್ಧ ದೂರಗಾಮಿ ಆಲೋಚನೆ ಅಗತ್ಯ ಇದೆ ಎಂದ ಅವರು, ಕೊರೊನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್ಗಳಿಗೆ ತೊಂದರೆಯಾಗಿದೆ. ಅಮೆರಿಕ, ಲಂಡನ್ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿ, ಅರ್ಚಕರು ಗೊಂದಲದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.