ತುಮಕೂರು:ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು, ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್. ರಾಜೇಂದ್ರ ಅವರು,ತುಮಕೂರಿನ ಗ್ರಾಮಾಂತರ ಶಾಸಕ ಗೌರಿ ಶಂಕರ್ ಮೇಲೆ ಮಾಡಿರುವ ಆರೋಪಗಳನ್ನು ವಾರದ ಒಳಗೆ ದಾಖಲೆಗಳ ಸಹಿತ ಸಾಬೀತುಪಡಿಸಲಿ ಇಲ್ಲ ಕ್ಷಮೆ ಕೇಳಲಿ ಎಂದರು.
ಶಾಸಕ ಗೌರಿ ಶಂಕರ್ ಮೇಲಿನ ಆರೋಪ ಸಾಬೀತುಪಡಿಸಲಿ: ಜೆಡಿಎಸ್ನ ಕೆಂಪರಾಜು ಆಗ್ರಹ - undefined
ಕಾಂಗ್ರೆಸ್ ಪಕ್ಷದ ಆರ್. ರಾಜೇಂದ್ರ ಅವರು ತುಮಕೂರಿನ ಗ್ರಾಮಾಂತರ ಶಾಸಕ ಗೌರಿ ಶಂಕರ್ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅವುಗಳನ್ನು ದಾಖಲೆ ಸಮೇತ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಜೆಡಿಎಸ್ನ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು ಎಚ್ಚರಿಸಿದ್ದಾರೆ.
ಹೀಗೆ ಮುಂದುವರೆದರೆ ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.ಅವರು ಶಾಸಕರ ಮೇಲೆ ದಾಖಲೆ ಇಲ್ಲದೆ ಏಕವಚನದಲ್ಲಿ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ಅವರು ಮಾಡುತ್ತಿರುವ ಆಪಾದನೆಗಳು ಎಲ್ಲವೂ ಸುಳ್ಳು. ಪದೇ ಪದೇ ಶಾಸಕರನ್ನು ಗಂಡಸಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರ ತಂದೆಯ ವಿರುದ್ಧ ಗೌರಿಶಂಕರ್ ಅವರು ಗೆಲುವು ಸಾಧಿಸುವ ಮೂಲಕ ಗಂಡಸು ಎಂದು ತೋರಿಸಿದ್ದಾರೆ. ಅದನ್ನು ಅವರು ಮರೆತ್ತಿದ್ದಾರೆ ಎನಿಸುತ್ತದೆ ಎಂದರು.
ರಾಜೇಂದ್ರ ಅವರು ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪಗಳು ಇದೇ ರೀತಿ ಮುಂದುವರೆದರೆ ಜಿಲ್ಲೆಯಾದ್ಯಂತ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.