ಕರ್ನಾಟಕ

karnataka

ETV Bharat / state

ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲುಜಾರಿ ಬಿದ್ದ ಯುವತಿಯರು: ಇಬ್ಬರ ಸಾವು - ಶಿರಾ ತಾಲೂಕಿನ ಕಳ್ಳಂಬೆಳ್ಳ

ಅಕ್ಕ ಶಿಲ್ಪ (18) ಹಾಗೂ ತಂಗಿ ಸುಶ್ಮಿತಾ (16) ಮೃತಪಟ್ಟಿದ್ದು, ಇನ್ನೋರ್ವ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಸಹೋದರಿಯರು, ಮನೆಗೆ ಸಂಬಂಧಿಕರು ಬಂದ ಹಿನ್ನೆಲೆ ಕೆರೆ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮೂವರು ಕಾಲುಜಾರಿ ಬಿದ್ದಾಗ ಒಬ್ಬರಿಗೊಬ್ಬರು ಪರಸ್ಪರ ರಕ್ಷಣೆ ಪಡೆಯಲು ಯತ್ನಿಸಿದ್ದಾರೆ. ಆದರೆ ಸ್ವಲ್ಪ ಮಟ್ಟಿಗೆ ಈಜು ಬರುತ್ತಿದ್ದ ಕಾರಣ ಓರ್ವ ಯುವತಿ ಈಜಿ ಪಾರಾಗಿದ್ದಾಳೆ.

Young womens take selfies at poolside dead news tumakuru
ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲುಜಾರಿ ಬಿದ್ದ ಯುವತಿಯರು: ಇಬ್ಬರ ಸಾವು,

By

Published : Nov 8, 2020, 3:54 PM IST

ತುಮಕೂರು:ಕೆರೆ ಸಮೀಪಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಸಹೋದರಿಯರು ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ದಲ್ಲಿ ನಡೆದಿದೆ.

ಅಕ್ಕ ಶಿಲ್ಪ (18) ಹಾಗೂ ತಂಗಿ ಸುಶ್ಮಿತಾ (16) ಮೃತಪಟ್ಟಿದ್ದು, ಇನ್ನೋರ್ವ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಸಹೋದರಿಯರು, ಮನೆಗೆ ಸಂಬಂಧಿಕರು ಬಂದ ಹಿನ್ನೆಲೆ ಕೆರೆ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮೂವರು ಕಾಲುಜಾರಿ ಬಿದ್ದಾಗ ಒಬ್ಬರಿಗೊಬ್ಬರು ಪರಸ್ಪರ ರಕ್ಷಣೆ ಪಡೆಯಲು ಯತ್ನಿಸಿದ್ದಾರೆ. ಆದರೆ ಸ್ವಲ್ಪ ಮಟ್ಟಿಗೆ ಈಜು ಬರುತ್ತಿದ್ದ ಕಾರಣ ಓರ್ವ ಯುವತಿ ಈಜಿ ಪಾರಾಗಿದ್ದಾಳೆ. ಸಾರ್ವಜನಿಕರ ಸಹಾಯ ಪಡೆಯಲು ಯತ್ನಿಸುವಷ್ಟರಲ್ಲಿ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಕಳ್ಳಂಬೆಳ್ಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details