ತುಮಕೂರು: ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲೂ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳು ಆಚರಣೆಯಲ್ಲಿದ್ದವು. ಆದರೆ, ಈಗ ನಶಿಸಿದ್ದು, ಅದು ಪುನರ್ ಸ್ಥಾಪನೆ ಆಗಬೇಕಿದೆ ಎಂದು ಕೃಷಿ ವೈದ್ಯಾಧಿಕಾರಿ ಡಾ. ಹೆಚ್.ಮಂಜುನಾಥ್ ಹೇಳಿದರು.
ತುಮಕೂರಿನ ವಿಜ್ಞಾನ ಕೇಂದ್ರದಲ್ಲಿ ಸಹಜ ಬೇಸಾಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ವಾಯುಗುಣ ವೈಪರಿತ್ಯದ ನಡುವೆ ಯಶಸ್ವಿ ಬೇಸಾಯ' ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಕೃಷಿ ವೈದ್ಯಾಧಿಕಾರಿ ಡಾ. ಹೆಚ್.ಮಂಜುನಾಥ್ ಇಂದು ವ್ಯವಸಾಯ ಯಶಸ್ವಿಯಾಗಲು ಸ್ಥಳೀಯ ದತ್ತಾಂಶಗಳು ಅಗತ್ಯ. ಹಾಗಾಗಿ ರೈತರು ಅದನ್ನು ಸಂಗ್ರಹಿಸುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸಿ ಬಳಸುವ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕಿದೆ. ಮಳೆ ಪ್ರಮಾಣ, ಗಾಳಿ ಬೀಸುವ ದಿಕ್ಕು, ಕೃಷಿ ಭೂಮಿಯಲ್ಲಿರುವ ತೇವಾಂಶ, ಸೂರ್ಯನ ಶಾಖ, ದಿನದಿಂದ ದಿನಕ್ಕೆ ಬದಲಾಗುವ ತಾಪಮಾನ ಹೀಗೆ ವಾಯುಗುಣ ವೈಪರಿತ್ಯಗಳಿಗೆ ಹೊಂದಿಕೆಯಾಗುವ ಬೇಸಾಯ ಮಾಡಿ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಇಲ್ಲವಾದರೆ ರೈತರು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸುವ ಅಂಶ ಹೆಚ್ಚಶಗಿರುತ್ತದೆ ಎಂದರು.
ಈ ಕಾರ್ಯಾಗಾರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಕೇವಲ ರೈತರಷ್ಟೇ ಅಲ್ಲದೆ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.