ಕರ್ನಾಟಕ

karnataka

ETV Bharat / state

ಸವಾರರಿಗೆ ನಿತ್ಯ ನರಕಯಾತನೆ... ಯಮ ಕಂಟಕವಾದ ಕಾಮಗಾರಿ ಗುಂಡಿಗಳು! - undefined

ಸುಮಾರು 3 ತಿಂಗಳಿನಿಂದ ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಅದು ಮುಗಿಯುವ ಯಾವ ಲಕ್ಷಣ ಕಾಣುತ್ತಿಲ್ಲ. ಯುಜಿಡಿ ಕಾಮಗಾರಿಯೋ ಅಥವಾ ನೀರಿನ ಪೈಪ್ ಲೈನ್ ಕಾಮಗಾರಿಯೋ ಎಂದು ತಿಳಿಯುತ್ತಿಲ್ಲ. ಆದರೆ ಈ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಯಮ ಕಂಟಕವಾದ ಕಾಮಗಾರಿ ಗುಂಡಿ..

By

Published : May 22, 2019, 2:21 AM IST

ತುಮಕೂರು: ಸ್ಮಾರ್ಟ್ ಸಿಟಿಗಾಗಿ ನಗರದ ಹಲವೆಡೆ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಕಾಮಗಾರಿ ಮಾತ್ರ ಆಮೆ ವೇಗದಲ್ಲಿರುವುದರಿಂದ ಜನರು ನಿತ್ಯ ಸಂಕಷ್ಟ ಪಡುವಂತಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿ ರಸ್ತೆಯನ್ನು ಸುಮಾರು 3 ತಿಂಗಳಿನಿಂದ ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಅದು ಮುಗಿಯುವ ಯಾವ ಲಕ್ಷಣ ಕಾಣುತ್ತಿಲ್ಲ. ಯುಜಿಡಿ ಕಾಮಗಾರಿಯೋ ಅಥವಾ ನೀರಿನ ಪೈಪ್ ಲೈನ್ ಕಾಮಗಾರಿಯೋ ಎಂದು ತಿಳಿಯುತ್ತಿಲ್ಲ. ಆದರೆ ಈ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಯಮ ಕಂಟಕವಾದ ಕಾಮಗಾರಿ ಗುಂಡಿ..

ನಗರದ ಬಸ್ ನಿಲ್ದಾಣದಿಂದ ಶಿರಾ, ಮಧುಗಿರಿ, ಪಾವಗಡ ಕಡೆಗೆ ಹೋಗಲು ಇರುವುದು ಇದೊಂದೇ ರಸ್ತೆ. ಪ್ರತಿದಿನ ನೂರಾರು ಬಸ್, ಕಾರು, ಲಾರಿ, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಈ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದರೆ ಸಾಕು ಜೀವ ಬಾಯಿಗೆ ಬಂದಂತಾಗುತ್ತದೆ. ಇಲ್ಲಿ ಯಾವ ಕಡೆಯಿಂದ ವಾಹನಗಳು ನುಗ್ಗುತ್ತವೆ, ಯಾರು ಬಂದು ಡಿಕ್ಕಿ ಹೊಡೆಯುತ್ತಾರೆ ಎಂಬ ಭಯದಲ್ಲಿಯೇ ವಾಹನ ಚಲಾಯಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ಪದೆ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬೆಳಗಿನಿಂದ ರಾತ್ರಿವರೆಗೂ ಜನದಟ್ಟಣೆಯಿಂದ ಕೂಡಿರುವ ರಸ್ತೆಯನ್ನು ಅಗೆದು ಅದ್ವಾನ ಮಾಡಿದ್ದಾರೆ. ಕಾಮಗಾರಿ ಎಷ್ಟು ಬೇಗ ಮುಗಿಯುತ್ತೋ, ರಸ್ತೆ ಯಾವಾಗ ಓಡಾಟಕ್ಕೆ ಮುಕ್ತವಾಗುತ್ತಾದೆಯೋ ಎಂದು ಜನರು ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

TAGGED:

ABOUT THE AUTHOR

...view details