ಪಾವಗಡ:ರಾಜ್ಯದಲ್ಲಿ ಕೊರೊನ ವೈರಸ್ ಹರಡುವಿಕೆ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮೇ 4 ರಂದು ಮದ್ಯಮಾರಾಟಕ್ಕೆ ಅನುಮತಿಸಲಾಗಿತ್ತು. ಆದ್ರೀಗ ತಾಲೂಕಿನ ಮಹಿಳೆಯರು ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ 'ಎಣ್ಣೆ' ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಆಕ್ರೋಶ ಏಕೆ?

ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿನ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಹಿನ್ನೆಲೆ, ಕುಡುಕರು ಬೆಳಗಿನಿಂದ ಸಂಜೆವರೆಗೂ ಕಂಠಪೂರ್ತಿ ಕುಡಿದು ಗ್ರಾಮದ ಬೀದಿಗಳಲ್ಲಿ ಅವಾಚ್ಯ ಶಬ್ದಗಳಿಂದ ಜನರನ್ನು ನಿಂದಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಮನೆಯ ಹೆಂಗಸರ ಮೇಲೆ ಹಲ್ಲೆ ಸೇರಿದಂತೆ ಬೆಳಗಿನಿಂದ ಸಂಜೆವರೆಗೂ ಗ್ರಾಮದಲ್ಲಿ ಅನಗತ್ಯ ಗಲಾಟೆ, ಗದ್ದಲ ಸೃಷ್ಟಿಸಿ ಗ್ರಾಮಸ್ಥರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಗ್ರಾಮದಲ್ಲಿ 'ಮದ್ಯ' ಮಾರಾಟ ನಿಲ್ಲಿಸುವಂತೆ ಆಗ್ರಹಿಸಿರುವ ಮಹಿಳೆಯರು ಕೆ.ಟಿ.ಹಳ್ಳಿ ಗ್ರಾಪಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು, ಸಂಬಂಧಪಟ್ಟವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದೆಂದು ತಿಳಿಸಿದಾಗ ಮಹಿಳೆಯರು ಮುತ್ತಿಗೆ ವಾಪಸ್ ಪಡೆದಿದ್ದಾರೆ.