ತುಮಕೂರು: ಲಾಕ್ಡೌನ್ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಬಹುತೇಕ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಕೆಲಸಗಳು ಸದ್ದಿಲ್ಲದೇ ಸಾಗಿವೆ. ಅದರಲ್ಲೂ ಇದೀಗ ಸೆಮಿನಾರ್ಗಳ ಬದಲಾಗಿ ವೆಬ್ನಾರ್ಗಳು ಜಾರಿಗೆ ಬಂದಿದೆ.
ತುಮಕೂರು ವಿವಿಯಲ್ಲಿ ಜೂಮ್, ವೆಬ್ ಎಕ್ಸ್ ಆ್ಯಪ್ ಮೂಲಕ ವೆಬ್ನಾರ್ ಜಾರಿ - ತುಮಕೂರು ವಿಶ್ವವಿದ್ಯಾಲಯ
ಜೂಮ್ ಹಾಗೂ ವೆಬ್ ಎಕ್ಸ್ ಸೇರಿದಂತೆ ವಿವಿಧ ಆ್ಯಪ್ಗಳನ್ನು ಬಳಸಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಸೆಮಿನಾರ್ಗಳ ಬದಲಾಗಿ ವೆಬ್ನಾರ್ಗಳನ್ನು ನಡೆಸಲಾಗುತ್ತಿದೆ.
ಇದರಲ್ಲಿ ವಿದ್ಯಾರ್ಥಿಗಳು ಮತ್ತು ವಿಷಯ ತಜ್ಞರು ಭಾಗವಹಿಸುತ್ತಿದ್ದಾರೆ. ಈ ಮೂಲಕ ಸೆಮಿನಾರ್ಗಳ ಆಯೋಜನೆಗೆ ಯಾವುದೇ ರೀತಿಯ ತೊಡಕುಂಟಾಗುತ್ತಿಲ್ಲ. ವಿದ್ಯಾರ್ಥಿಗಳು ಕೂಡ ಆನ್ಲೈನ್ ಮೂಲಕ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಜೂಮ್ ಹಾಗೂ ವೆಬ್ ಎಕ್ಸ್ ಸೇರಿದಂತೆ ವಿವಿಧ ಆ್ಯಪ್ಗಳನ್ನು ಬಳಸಿ ವೆಬ್ನಾರ್ಗಳನ್ನು ನಡೆಸಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ನಡೆಸಲಾದ ಸುಮಾರು 70 ಸೆಮಿನಾರ್ಗಳಲ್ಲಿ(ವೆಬ್ನಾರ್) ಉಪಕುಲಪತಿ ಸಿದ್ದೇಗೌಡ ಅವರು ಕೂಡ ಭಾಗವಹಿಸಿದ್ದಾರೆ. ನಿತ್ಯ ಕನಿಷ್ಠ ಎರಡು ವೆಬ್ನಾರ್ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶೈಕ್ಷಣಿಕ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆನ್ಲೈನ್ ಮೂಲಕ ಉಳಿದ ಪಠ್ಯವನ್ನು ಪೂರ್ಣಗೊಳಿಸಲಾಗಿದೆ ಅಲ್ಲದೇ ಪ್ರಾಜೆಕ್ಟ್ ಗಳನ್ನು ಕೂಡ ಮಾಡಿಸಲಾಗಿದೆ.