ತುಮಕೂರು:ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಕೂಡಲಸಂಗಮದಿಂದಸಂಕ್ರಾಂತಿ ದಿನದಂದು ಆರಂಭವಾದ ಪಾದಯಾತ್ರೆ ಇಂದು ತುಮಕೂರು ತಲುಪಿದ್ದು, 28ನೇ ದಿನಕ್ಕೆ ನಮ್ಮ ಪಾದಯಾತ್ರೆ ಕಾಲಿಟ್ಟಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಂದು ತುಮಕೂರು ತಲುಪಿ ಮಾತನಾಡಿದ ಅವರು, ಪಾದಯಾತ್ರೆ ಬೆಂಗಳೂರು ಮುಟ್ಟುವುದರೊಳಗೆ 2ಎ ಮೀಸಲಾತಿ ಘೋಷಿಸಿ ಗೆಜೆಟ್ ಹೊರಡಿಸಲು ಒತ್ತಾಯಿಸಿದ್ದೇವೆ. ಘೋಷಿಸದಿದ್ದಲ್ಲಿ ಸಮಾವೇಶ ನಡೆಸಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ವರದಿ ವಿಳಂಬವಾದರೆ ಹೇಗೆ ಎಂಬುದರ ಕುರಿತು ಚರ್ಚಿಸಲಾಗುವುದು. ನಮ್ಮ ಪ್ರಕಾರ ಫೆ.18 ರಂದು ಪಾದಯಾತ್ರೆ ಬೆಂಗಳೂರಿಗೆ ತಲುಪಲಿದೆ. ಆ ಬಳಿಕ ಯಾವಾಗ ಸಮಾವೇಶ ಮಾಡಬೇಕು ಎಂದು ತೀರ್ಮಾನಿಸುತ್ತೇವೆ. ಏನೇ ಮನವೊಲಿಸಿದರೂ ಅದು ಗೆಜೆಟ್ ನೋಟಿಫಿಕೇಷನ್ಗೆ ಪೂರಕವಾಗಿರಬೇಕು ಎಂದರು.
ಈಗಾಗಲೇ ಶೇ 80 ರಷ್ಟು ಪಾದಯಾತ್ರೆ ಮುಗಿಸಿದ್ದೇವೆ, ಇನ್ನೂ ಕಾಲಾವಕಾಶ ಕೊಡೋದು ಕನಸಿನ ಮಾತು. ಬೆಂಗಳೂರಿಗೆ ಪಾದಯಾತ್ರೆ ಹೋಗೋದು ಶತಃಸಿದ್ದ. ಅಲ್ಲಿ ಸಮಾವೇಶ ಆಗೋದು ಪಕ್ಕಾ ಎಂದರು.