ತುಮಕೂರು :ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ನವರು ಯಾರೂ ಬಂದು ಬೆಂಬಲ ಕೇಳಲಿಲ್ಲ. ಹಾಗಂತ ಬಿಜೆಪಿ ಸರ್ಕಾರ ಮಾಡುವ ಅನ್ಯಾಯಗಳಿಗೆಲ್ಲ ನಾವು ಬೆಂಬಲ ಕೊಡುವುದಿಲ್ಲ ಎಂದು ಜೆಡಿಎಸ್ ಶಾಸಕ ಗೌರಿಶಂಕರ್ ತಿಳಿಸಿದರು.
ತುಮಕೂರು ಜಿಲ್ಲೆ ಹೆಬ್ಬೂರು ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯೇ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಅಲ್ಲದೇ ಖುದ್ದು ಬಂದು ಮತಯಾಚನೆ ಮಾಡಿದ್ದರು. ಅವರು ಬೆಂಬಲ ಕೇಳಿದಂತೆ ನಾವು ಕೊಟ್ಟಿದ್ದೇವೆ ಎಂದು ಹೇಳಿದರು.