ಕರ್ನಾಟಕ

karnataka

ETV Bharat / state

ನಮ್ಮಲ್ಲಿ ಜಲದ ಬಗ್ಗೆ ನೂತನ ಕಲಿಕೆ ಆಗಬೇಕಿದೆ.. ವಿ ಎಸ್ ಪ್ರಕಾಶ್ - ಕೆ.ಎಸ್.ಎನ್.ಡಿ.ಎಂ.ಸಿಯ ನಿವೃತ್ತ ಸ್ಥಾಪಕ ವಿ.ಎಸ್.ಪ್ರಕಾಶ್

ತುಮಕೂರಿನಲ್ಲಿ ಜಿಲ್ಲಾ ಜಲಾಸಕ್ತರಿಂದ 2 ದಿನದ ಜಲದ ನಾಡು ಸಮಾವೇಶವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಜ್ಞಾನ ಮಂಡಳಿ ಹಾಗೂ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಯಿತು.

ಜಲಾಸಕ್ತರಿಂದ 2 ದಿನದ ಜಲದ ನಾಡು ಸಮಾವೇಶ

By

Published : Jul 28, 2019, 10:06 AM IST

Updated : Jul 28, 2019, 10:46 AM IST

ತುಮಕೂರು: ಕಳೆದ 20ವರ್ಷಗಳಿಂದ ತಿಳಿದ ಅನುಭವ ಮತ್ತು ಅನುಭಾವದಿಂದ ಹೇಳಬಲ್ಲೆ, ನಮ್ಮಲ್ಲಿ ಜಲದ ಬಗ್ಗೆ ನೂತನ ಕಲಿಕೆ ಆಗಬೇಕಿದೆ. ನಾವೆಲ್ಲರೂ ಕಲಿಕೆಯ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ಕೆಎಸ್ಎನ್‌ಡಿಎಂಸಿಯ ನಿವೃತ್ತ ಸ್ಥಾಪಕ ವಿ ಎಸ್ ಪ್ರಕಾಶ್ ಕರೆ ನೀಡಿದರು.

ನಮ್ಮಲ್ಲಿ ಜಲದ ಬಗ್ಗೆ ನೂತನ ಕಲಿಕೆ ಆಗಬೇಕಿದೆ .. ವಿ ಎಸ್ ಪ್ರಕಾಶ್

ತುಮಕೂರು ಜಿಲ್ಲಾ ಜಲಾಸಕ್ತರಿಂದ 2 ದಿನದ ಜಲದ ನಾಡು ಸಮಾವೇಶವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಜ್ಞಾನ ಮಂಡಳಿ ಹಾಗೂ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಮೋಡ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಇದರ ನಡುವೆ ಮೋಡ ಬಿತ್ತನೆ ಕಾರ್ಯಕ್ಕೆ ಬೇಕು-ಬೇಡ ಎಂಬ ಚರ್ಚೆಗಳು ಹೆಚ್ಚಾಗುತ್ತಿವೆ.

ಜಲ, ಜಲನಿರ್ವಹಣೆಯ ಬಗ್ಗೆ ನನ್ನ 20 ವರ್ಷಗಳ ಅನುಭವ ಮತ್ತು ಅನುಭಾವದಿಂದ ಹೇಳಬಲ್ಲೆ, ನಮ್ಮಲ್ಲಿ ಜಲದ ಬಗ್ಗೆ ನೂತನ ಕಲಿಕೆ ಆಗಬೇಕಿದೆ. ಆ ಹೊಸ ಕಲಿಕೆಯ ಕಡೆಗೆ ನಾವೆಲ್ಲರೂ ಸಾಗಬೇಕಿದೆ. ಆ ಮೂಲಕ ಜಲದ ಬಗ್ಗೆ ಅರಿಯುವ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದು ವಿ ಎಸ್ ಪ್ರಕಾಶ್ ತಿಳಿಸಿದರು.

ನಂತರ ಮಾತನಾಡಿದ ಸಹಜ ಬೇಸಾಯ ಕೃಷಿಕ ಸಿ. ಯತಿರಾಜು, ಮೊದಲು ತುಮಕೂರು ಜಿಲ್ಲೆಯ ನೈಸರ್ಗಿಕ ಗಡಿಗಳನ್ನು ಗುರುತಿಸಬೇಕು. ಆನಂತರದಲ್ಲಿ ನೀರಿನ ಕ್ರೂಢೀಕರಣದ ಬಗ್ಗೆ ಚಿಂತನೆ ಮಾಡಬೇಕು. ಕೆರೆ, ಕಟ್ಟೆ ಮತ್ತು ನೀರಿನ ಟ್ಯಾಂಕ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ನೀರನ್ನು ಸಂಗ್ರಹಿಸಿದರೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ.

ಇಲಾಖೆಯ ಅಧಿಕಾರಿಗಳಲ್ಲಿ ಅಸೂಯೆ ಉಂಟಾಗಿದ್ದು, ಒಂದು ಇಲಾಖೆ ಮಾಡಿದಂತಹ ಕಾರ್ಯವನ್ನು ಮತ್ತೊಂದು ಇಲಾಖೆ ಕೆಡಿಸುವ ಕಾರ್ಯ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Last Updated : Jul 28, 2019, 10:46 AM IST

ABOUT THE AUTHOR

...view details