ಕರ್ನಾಟಕ

karnataka

ETV Bharat / state

ಹೇಮಾವತಿ ನಾಲೆಗೆ ಹರಿದ ನೀರು... ರೈತರಲ್ಲಿ ಸಂತಸ - Hemavathi Canal

ಗೊರೂರು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಗಳಿಗೆ ನೀರು ಬಿಡುಗಡೆಯಾಗಿದೆ. ಸಂಪೂರ್ಣ ಬತ್ತಿ ಹೋದ ಪರಿಸ್ಥಿತಿಯಲ್ಲಿದ್ದ ನಾಲೆಗಳಲ್ಲಿ ಕೆಂಪು ಬಣ್ಣ ಮಿಶ್ರಿತ ನೀರು ಹರಿಯುತ್ತಿದೆ.

ಹೇಮಾವತಿ ನಾಲೆ

By

Published : Aug 10, 2019, 9:12 PM IST

ತುಮಕೂರು:ಹಾಸನ ಜಿಲ್ಲೆಯ ಗೊರೂರು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡುಗಡೆಯಾಗಿದೆ. ತುಮಕೂರು ಜಿಲ್ಲೆಯ ಹೇಮಾವತಿ ನಾಲೆಗಳಲ್ಲಿ ನೀರು ಹರಿದು ಬರುತ್ತಿದ್ದು, ನೀರಿನ ಅಭಾವ ತಪ್ಪಲಿದೆ.

ಜಿಲ್ಲೆಯ ಗುಬ್ಬಿ, ತಿಪಟೂರು ಹಾಗೂ ತುಮಕೂರು ತಾಲೂಕಿನ ಬಹುತೇಕ ನಾಲೆಗಳಲ್ಲಿ ನೀರು ಬರುತ್ತಿರುವ ದೃಶ್ಯವನ್ನು ನೋಡಲು ರೈತರು ನಾಲೆಗಳ ಬಳಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ಸಂಪೂರ್ಣ ಬತ್ತಿ ಹೋದ ಪರಿಸ್ಥಿತಿಯಲ್ಲಿದ್ದ ನಾಲೆಗಳಲ್ಲಿ ಕೆಂಪು ಬಣ್ಣ ಮಿಶ್ರಿತ ನೀರು ಹರಿಯುತ್ತಿದೆ.

ಹೇಮಾವತಿ ನಾಲೆಗೆ ಹರಿದ ನೀರು

ಇನ್ನೊಂದೆಡೆ ನಾಲೆಯಲ್ಲಿ ಹರಿಯುತ್ತಿರುವ ನೀರಿಗೆ ಕನ್ನ ಹಾಕುವ ಕೃತ್ಯ ಕಂಡುಬಂದಿದೆ. ಬುಗುಡನಹಳ್ಳಿ ಕೆರೆ ಸಮೀಪ ನಾಲೆಯಲ್ಲಿ ಅನಧಿಕೃತವಾಗಿ ಕೆಲ ದುಷ್ಕರ್ಮಿಗಳು ಪಂಪ್​ ಸೆಟ್​​ ಮೂಲಕ ಬಂಕಾಪುರ ಕೆರೆಗೆ ನೀರು ಒಯ್ಯಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತುಮಕೂರು ತಹಶೀಲ್ದಾರ್ ಯೋಗಾನಂದ್, ತುಮಕೂರು ಗ್ರಾಮಾಂತರ ಠಾಣೆ ಇನ್ಸ್​ಪೆಕ್ಟರ್ ಮಧುಸೂದನ್ ಮತ್ತು ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ನಾಲೆಯಿಂದ ಕೆರೆಗೆ ನೀರು ಹರಿಯುವ ಹಿನ್ನೆಲೆಯಲ್ಲಿ ಪಂಪ್​ ಸೆಟ್ ವಿದ್ಯುತ್ ಸಂಪರ್ಕ ಕಡಿತ, ತೆರವುಗೊಳಿಸಲು ಆದೇಶಿಸಿದರು. ಈ ರೀತಿ ಯಾರೂ ಕೂಡ ನೀರು ಎತ್ತಬಾರದು, ವ್ಯರ್ಥವಾಗಬಾರದು ಎಂದು ನಿಗದಿತ ಕೆರೆಗಳಿಗೆ ನೀರು ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದರು.

ABOUT THE AUTHOR

...view details