ತುಮಕೂರು :ಜಿಲ್ಲೆಯಲ್ಲಿ ಒಂದೆಡೆ ಭರ್ಜರಿ ಮಳೆಯಾಗಿದೆ(heavy rain). ಇನ್ನೊಂದೆಡೆ ಹೇಮಾವತಿ ನದಿ ನೀರು ಕೂಡ ಹರಿದು ಬರುತ್ತಿರುವುದರಿಂದ ಕೆರೆಕಟ್ಟೆಗಳಲ್ಲಿ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ.
ಆದರೆ, ಕೆಲವೆಡೆ ಕೋಡಿಬಿದ್ದ ನೀರು, ಹೆಚ್ಚುವರಿ ನೀರು ಹರಿದು ಹೋಗದಂತೆ ಕೆಲವರು ಮರಳಿನ ಮೂಟೆಗಳನ್ನು ಇಟ್ಟು ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ. ಇದರಿಂದಾಗಿ ಹೆಚ್ಚುವರಿ ನೀರು ಕೆರೆಯಲ್ಲಿ ಸಂಗ್ರಹವಾಗಿ ಸಮೀಪದ ಗ್ರಾಮದೊಳಗೆ ನುಗ್ಗುತ್ತಿದೆ.
ಇದೇ ರೀತಿ ಚಿಕ್ಕನಾಯಕನಹಳ್ಳಿ(Chikkanayakanahalli)ತಾಲೂಕಿನ ಹುಳಿಯಾರು ಸಮೀಪದ ತಿಮ್ಮಲಾಪುರ ಕೆರೆಯಲ್ಲಿ ಎರಡು ಕೋಡಿಗಳಲ್ಲಿ ನೀರು ಹರಿಯುವುದನ್ನು ತಡೆದಿದ್ದಾರೆ.