ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಗತ್ತಿನ ಮೂಲಪುರುಷ ವಿಶ್ವಕರ್ಮ: ಶ್ರೀ ನೀಲಕಂಠಾಚಾರ್ಯ - ವಿಶ್ವಕರ್ಮ ಜಯಂತಿ ಆಚರಣೆ ಸುದ್ದಿ
ಜಗತ್ತಿನ ಸೃಷ್ಟಿಗಾಗಿ ಕಾಳಿಕಾದೇವಿಯು ಮೂಲ ಪುರುಷನನ್ನಾಗಿ ವಿಶ್ವಕರ್ಮನನ್ನು ಸೃಷ್ಟಿ ಮಾಡುತ್ತಾಳೆ. ಜಗತ್ತನ್ನು ಸೃಷ್ಟಿ ಮಾಡಿ, ಪಂಚ ಕಸುಬುಗಳನ್ನು ಮಾಡಿ ಉಪಕಸುಬುಗಳನ್ನು ನೀಡಿ, ಸಾವಿರಾರು ಜನರಿಗೆ ಕಾಯಕವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ವಿಶ್ವಕರ್ಮ.
Vishwakarma Jayanti
ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ, ಜಗತ್ತಿನ ಸೃಷ್ಟಿಗಾಗಿ ಕಾಳಿಕಾದೇವಿಯು ಮೂಲ ಪುರುಷನನ್ನಾಗಿ ವಿಶ್ವಕರ್ಮನನ್ನು ಸೃಷ್ಟಿ ಮಾಡುತ್ತಾಳೆ. ಜಗತ್ತನ್ನು ಸೃಷ್ಟಿ ಮಾಡಿ, ಪಂಚ ಕಸುಬುಗಳನ್ನು ಮಾಡಿ ಉಪಕಸುಬುಗಳನ್ನು ನೀಡಿ, ಸಾವಿರಾರು ಜನರಿಗೆ ಕಾಯಕವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ವಿಶ್ವಕರ್ಮ. ಆತ ಜಗತ್ತಿನ ಮೂಲ ಪುರುಷ, ಇಂದಿನ ಬದುಕಿನ ಕಾಯಕಲ್ಪದಲ್ಲಿ ಮೊದಲನೆಯ ಮೂಲ ವಿಶ್ವಕರ್ಮ. ಜಗತ್ತಿನ ಸೃಷ್ಟಿಯಲ್ಲಿ ಭಗವಂತನು ಜೀವನದ ಶೈಲಿಯನ್ನು ಮತ್ತು ಬದುಕನ್ನು ರೂಪಿಸಿಕೊಟ್ಟ ಮಹಾನ್ ಪುರುಷ ವಿಶ್ವಕರ್ಮ ಎಂದರು.