ತುಮಕೂರು :ಜಿಲ್ಲೆಯ ತುರುವೇಕೆರೆ ತಾಲೂಕಿನ 21ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಸಂತಸಗೊಂಡ ಸ್ಥಳೀಯರು ಇದಕ್ಕೆ ಕಾರಣಕರ್ತರಾದ ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಅಭಿಷೇಕ ಮಾಡಿ ಸಂಭ್ರಮಿಸಿದರು.
ಮೂವತ್ತು ವರ್ಷಗಳಿಂದ ನೀರು ಹರಿಯದ ಕೆರೆಗಳಲ್ಲಿ ಈ ಬಾರಿ ನೀರು ಸಂಗ್ರಹವಾಗಿದೆ. ತುರುವೇಕೆರೆ ಹೋಬಳಿಯ ಸಿಎಸ್ ಪುರ ಕೆರೆ ಸೇರಿ ಸಿಎಸ್ ಪುರ ಹೋಬಳಿಯ ಒಟ್ಟು 21 ಕೆರೆಗಳಿಗೆ ಹೇಮಾವತಿ ನೀರು ಹರಿದಿದೆ.