ಕರ್ನಾಟಕ

karnataka

ETV Bharat / state

ದಯಮಾಡಿ ಸರ್ಕಾರಿ ಬಸ್​​ಗಳನ್ನ ಹೆಚ್ಚಿಸಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ - ವಿವಿಧ ಸಂಘಟನೆಗಳ ಪ್ರತಿಭಟನೆ ತುಮಕೂರು

ವಿವಿಧ ಸಂಘಟನೆಗಳು ತುಮಕೂರಿನಿಂದ ಮಧುಗಿರಿ, ಪಾವಗಡ ಮಾರ್ಗವಾಗಿ ಚಲಿಸುವ ಖಾಸಗಿ ಬಸ್​ಗಳ ಪರವಾನಗಿ ರದ್ದುಗೊಳಿಸಿ, ಸರ್ಕಾರಿ ಬಸ್​ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

ವಿವಿಧ ಸಂಘಟನೆಗಳ ಪ್ರತಿಭಟನೆ

By

Published : Nov 6, 2019, 8:23 AM IST

ತುಮಕೂರು: ಅಕ್ಟೋಬರ್ 30 ರಂದು ಕೊರಟಗೆರೆ ಮಾರ್ಗ ಮಧ್ಯೆ ಬಸ್ ಅಪಘಾತವಾಗಿ ಐದು ಜನ ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಕೊರಟಗೆರೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘಟನೆಗಳು ತುಮಕೂರಿನಿಂದ ಮಧುಗಿರಿ, ಪಾವಗಡ ಮಾರ್ಗವಾಗಿ ಚಲಿಸುವ ಖಾಸಗಿ ಬಸ್​ಗಳ ಪರವಾನಗಿ ರದ್ದುಗೊಳಿಸಿ, ಸರ್ಕಾರಿ ಬಸ್​ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

ವಿವಿಧ ಸಂಘಟನೆಗಳು ಖಾಸಗಿ ಬಸ್​ಗಳ ಪರವಾನಗಿ ರದ್ದುಗೊಳಿಸಿ, ಸರ್ಕಾರಿ ಬಸ್​ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

ತುಮಕೂರಿನಿಂದ ಪಾವಗಡದವರೆಗೂ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್​ಗಳ ಅತಿಯಾದ ವೇಗ ಮತ್ತು ಚಾಲಕನ ನಿರ್ಲಕ್ಷದಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರ ಪ್ರಾಣ ಬಲಿಯಾಗುತ್ತಿದೆ. ಹೀಗಾಗಿ ಖಾಸಗಿ ಬಸ್​ಗಳ ಪರವಾನಗಿ ನಿಷೇಧಿಸಿ ಕೆಎಸ್​ಆರ್​ಟಿಸಿ ವಾಹನಗಳ ಸಂಖ್ಯೆಯನ್ನು ಈ ಮಾರ್ಗದಲ್ಲಿ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಇನ್ನು ಕಳೆದ ಅಕ್ಟೋಬರ್​ನಲ್ಲಿ ಆದಂತಹ ಅಪಘಾತದಲ್ಲಿ ಹಾನಿಗೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಜಟ್ಟಿ ಅಗ್ರಹಾರ ನಾಗರಾಜು, ಸಾಮಾಜಿಕ ಚಿಂತಕ ಚೇತನ್, ಚಾಂದ್ ಪಾಷಾ ಹಾಗೂ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಭಾಗಿಯಾಗಿದ್ದವು.

ABOUT THE AUTHOR

...view details